ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಎಲ್ಲ ಕಡತಗಳನ್ನು ಸ್ವೀಕರಿಸುತ್ತಿರುವ ಅಧ್ಯಕ್ಷ ಈಶ್ವರ ನಾಗರಾಳ.
ಕಾಗದ ಪತ್ರಗಳನ್ನು ವರ್ಗಾಯಿಸಿದ ಪ್ರಾಧಿಕಾರ ಕಚೇರಿ
ರಬಕವಿ-ಬನಹಟ್ಟಿ,ಜು10: ಹೆಸರಿಗೆ ಅಷ್ಟೇ ಕಚೇರಿಯಾಗಿದ್ದ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಬಗ್ಗೆ ಜು.10 ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ `ನೂತನ ಅಧ್ಯಕ್ಷರಿಗೆ ಸವಾಲಾದ ಪ್ರಾಧಿಕಾರ ಕಚೇರಿ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿದ ಇಲಾಖೆ ಜಮಖಂಡಿಯಲ್ಲಿದ್ದ ರಬಕವಿ-ಬನಹಟ್ಟಿ ಭಾಗದ ಕಟ್ಟಡ ಪರವಾನಿಗೆ, ಕೆಜೆಪಿ, ಅನುಮತಿ ಪತ್ರ, ವಿನ್ಯಾಸ, ಭೂ ಉಪಯೋಗ ಹೀಗೆ ಹಲವಾರು ಕಚೇರಿಗೆ ಸಂಬಂಧಿಸಿದ ಪತ್ರಗಳು ಸ್ಥಳೀಯ ಪ್ರಾಧಿಕಾರ ಕಚೇರಿ ಸೇರಿವೆ.
ಈ ಕುರಿತು ನೂತನ ಅಧ್ಯಕ್ಷ ಈಶ್ವರ ನಾಗರಾಳ ಮಾತನಾಡಿ, ಶೀಘ್ರದಲ್ಲಿಯೇ ಅಧಿಕೃತವಾಗಿ ಕಚೇರಿ ಸಿಬ್ಬಂದಿಯನ್ನು ಒದಗಿಸುವಂತೆ ಮೇಲಧಿಕಾರಿಗಳಿಗೆ ತಿಳಿಸಿದ್ದು, ಇದಕ್ಕೂ ಸಹಮತ ದೊರೆತಿರುವ ಹಿನ್ನಲೆ ಸ್ಥಳೀಯರ ಸೌಲಭ್ಯಗಳಿಗೆ ಸಂಪೂರ್ಣ ಕಾರ್ಯನಿರ್ವಹಣೆ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿಯಲ್ಲಿಯೇ ನಡೆಯುತ್ತದೆ ಎಂದು ತಿಳಿಸಿದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin