ತೇರದಾಳ ಪಟ್ಟಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್‍ಡೌನ್ ಮಾಡಲಾಗಿದೆ.
ತೇರದಾಳದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್
ತೇರದಾಳ : ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸೋಂಕಿತರ ಪ್ರದೇಶದಲ್ಲಿ ಸೀಲ್‍ಡೌನ್ ಮಾಡಲಾಗುತ್ತಿದೆ. ಕೊರೊನಾ ಪಾಸಿಟಿವ್ ಮತ್ತೊಂದು ಪ್ರಕರಣ ಪತ್ತೆಯಾಗುತ್ತಿದ್ದಂತೆ ಪಟ್ಟಣದ ಜನರನ್ನು ಭಯ ಭೀತರನ್ನಾಗಿಸಿದೆ.
ಕಿಲ್ಲಾ ಭಾಗದ 60ವರ್ಷದ ಪುರುಷನಲ್ಲಿ ಆಯ್‍ಎಲ್‍ಆಯ್ ಲಕ್ಷಣಗಳು ಕಂಡು ಬಂದಿದ್ದರಿಂದ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿ ಅವನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಅವನನ್ನು ಬಾಗಲಕೋಟ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ ತಿಳಿಸಿದ್ದಾರೆ.
ಸೋಂಕಿತ ಕಂಡು ಬಂದಿರುವ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗುತ್ತಿದೆ. ಗುರುವಾರ ಸಾಯಂಕಾಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್‍ಡೌನ್ ಮಾಡಲಾಗಿದೆ. ಹಾಗೂ ತಳವಾರ ಗಲ್ಲಿಯಲ್ಲಿ ಮಂಗಳವಾರ ಒಬ್ಬ ಸೋಂಕಿತ ಕಂಡು ಬಂದ ಕೂಡಲೆ ಸೋಂಕಿತ ವಾಸಿಸುತ್ತಿದ್ದ ಮನೆಯ ಸುತ್ತಲೂ ಬಿದಿರನ್ನು ಕಟ್ಟಿ ಸೀಲ್‍ಡೌನ್ ಮಾಡಲಾಗಿದೆ. ಒಟ್ಟಾರೆಯಾಗಿ ಪಟ್ಟಣದ ದೇವರಾಜ ನಗರದಲ್ಲಿ ಮೂವರು ಸೋಂಕಿತರ ವಾಸಿಸುತ್ತಿರುವ ಪ್ರದೇಶವನ್ನು ಹಾಗೂ ಪೋಲಿಸ್ ಕ್ವಾಟರ್ಸ್ ಮತ್ತು ಜವಳಿ ಬಜಾರದಲ್ಲಿನ ಸೋಂಕಿತ ವಾಸಿಸುತ್ತಿರುವ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತರು ವಾಸಿಸುತ್ತಿರುವ ಪ್ರದೇಶವನ್ನು ಪುರಸಭೆಯವರು ಸ್ಯಾನಿಟೈಜರ್ ಮಾಡಿದ್ದಾರೆ ಎಂದು ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ ತಿಳಿಸಿದ್ದಾರೆ.
Social Plugin