ರಾಂಪೂರಿನಲ್ಲಿ ಮನೆಯನ್ನೇ ಕಂಟೇನ್ಮೆಂಟ್ ವಲಯವನ್ನಾಗಿ ಪರಿವರ್ತಿಸಿರುವದು.
ಐವರಿಗೆ ಕೊರೊನಾ ಸೋಂಕು: ತಾಲೂಕಿನಲ್ಲಿ ಒಟ್ಟು 61 ಕ್ಕೆ ಏರಿಕೆ
ರಬಕವಿ-ಬನಹಟ್ಟಿ,ಜು24: ತಾಲೂಕಿನಲ್ಲಿ ಶುಕ್ರವಾರ ಮತ್ತೇ ಐವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಒಟ್ಟಾರೆ 61 ಜನರಿಗೆ ಕೊರೊನಾ ಪಾಜಿಟಿವ್ ಬಂದ ವರದಿಯಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೊರೊನಾ ವೈರಸ್ ಅತಿ ವೇಗವಾಗಿ ಹರಡುತ್ತಿದ್ದು, ಕಂಟೇನ್ಮೆಂಟ್ ವಲಯಗಳು ದಿನಂದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿವೆ. ಇಂದು ದೃಢಪಟ್ಟ ಐವರು ಸೋಂಕಿತರು ಐಎಲ್‍ಐ ಹಾಗು ಸಾರಿ ಪ್ರಕರಣಗಳಾಗಿವೆ.
ರ್ಯಾಪಿಡ್ ಪರೀಕ್ಷೆ: ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಪ್ರತಿ ದಿನ 20 ರಿಂದ 25 ಜನರಿಗೆ ರ್ಯಾಪಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರ ಪರೀಕ್ಷೆ ನಡೆಸಲಾಗುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಳಗೊಳ್ಳುತ್ತಿದೆ. ಇದರಿಂದ ಜನತೆ ತೀವ್ರ ಆತಂಕದಲ್ಲಿದ್ದಾರೆ.
ಮನೆ ಬಿಟ್ಟು ಹೊರಬರಬೇಡಿ: ಇಲ್ಲಿನ ತಾಲೂಕಾಡಳಿತ, ನಗರಸಭೆ ಹಾಗು ಪೊಲೀಸ್ ಇಲಾಖೆ ಜಂಟಿಯಾಗಿ ಜನರಲ್ಲಿ ಮನೆ ಬಿಟ್ಟು ಹೊರಬರಬೇಡಿ ಎಂದು ಮನವಿ ಮಾಡುತ್ತಿದ್ದರೂ ಜನತೆ ಯಾವದೇ ರೀತಿ ಸ್ಪಂದಿಸದೆ ಬೇಕಾಬಿಟ್ಟಿ ಸಂಚಾರ ನಡೆಸುತ್ತಿದ್ದಾರೆ. ದಿವ್ಯ ನಿರ್ಲಕ್ಷ್ಯದಿಂದಾಗಿಯೇ ಮತ್ತಷ್ಟು ಸೋಂಕಿತರ ಹೆಚ್ಚಳಗೊಳ್ಳುವ ಆತಂಕ ಎದುರಾಗಿದೆ.
ಇಲ್ಲಿನ ಮಾರುಕಟ್ಟೆಯನ್ನು ಎಸ್‍ಆರ್‍ಎ ಮೈದಾನಕ್ಕೆ ಸ್ಥಳಾಂತರಿಸಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ. ಮಾಸ್ಕ್ ಹಾಗು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ತರಕಾರಿ ಖರೀದಿಗೆ ಮುಗಿಬೀಳುತ್ತಿರುವ ಜನತೆ ದಿವ್ಯ ನಿರ್ಲಕ್ಷ್ಯ ತೋರಿಸುವಲ್ಲಿ ಕಾರಣವಾಗಿದೆ.

Social Plugin