ತೇರದಾಳ : ಬಾಗಲಕೋಟ ಜಿಲ್ಲೆಯ ತೇರದಾಳ ಪಟ್ಟಣದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವರ ದೇವಸ್ಥಾನದಲ್ಲಿ ಜನದಟ್ಟನೆಯಾಗದಂತೆ ಭಕ್ತರು ಸಹಕರಿಸಬೇಕು ಎಂದು ಶ್ರೀಅಲ್ಲಮಪ್ರಭು ದೇವರ ದೇವಸ್ಥಾನದ ಸಮಸ್ತ ಅರ್ಚಕರು ಹಾಗೂ ನಾಡಗೌಡರು ಪಟ್ಟಣದ ಪ್ರಮುಖರು ವಿನಂತಿಸಿದ್ದಾರೆ.
ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಅದನ್ನು ತಡೆಗಟ್ಟಲು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ಕ್ಯಾಪ್ಟನ್ ಕೆ.ರಾಜೇಂದ್ರ ಇವರ ಆದೇಶದಂತೆ ಗ್ರಾಮ, ಪಟ್ಟಣ, ನಗರಗಳಲ್ಲಿ ಸೇರುವ ಸಂತೆಗಳನ್ನು ನಿಷೇಧ ಮಾಡಿದ್ದು. ಮದುವೆ ಮುಂಜುವೆ ಕಾರ್ಯಕ್ರಮಗಳನ್ನು ಮತ್ತು ಜಾತ್ರೆ ಹಬ್ಬ ಹರಿದಿನಗಳನ್ನು ನಿಷೇಧ ಮಾಡಲಾಗಿದೆ. ಕಾರಣ ಭಕ್ತರು ದೇವಸ್ಥಾನದ ಆವರಣದಲ್ಲಿ ಯಾರು ಸೇರುವಂತಿಲ್ಲ.
ಶ್ರಾವಣ ಮಾಸದ ನಿಮಿತ್ಯ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ರುದ್ರಾಭಿಷೇಕ, ಅಭಿಷೇಕಗಳಂತಹ ಹಲವಾರು ಪೂಜಾ ವಿಧಿ ವಿಧಾನಗಳು ನಡೆಯುತ್ತಿರುತ್ತವೆ. ಆದರೆ ದೇವಸ್ಥಾನದ ಎಲ್ಲ ದ್ವಾರಗಳನ್ನು ಮುಚ್ಚಲಾಗಿರುತ್ತದೆ. ಆದಿ ಅನಾದಿ ಕಾಲದಿಂದಲೂ ನಡೆದು ಬಂದಿರುವ ನಸುಕಿನ ಜಾವದಲ್ಲಿ ಊದು ನೀಡುವುದು ಕಾರ್ಯಕ್ರಮ ವಿಶೇಷವಾಗಿದ್ದು ಆ ಸಂದರ್ಭದಲ್ಲಿ ಜನ ಸೇರುವುದು ಸಹಜ ಆದರೆ ಈ ವರ್ಷ ಮಾತ್ರ ಜಿಲ್ಲಾಧಿಕಾರಿಗಳ ಆದೇಶದ ಮೇರಗೆ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಸದ್ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದರೆ ಮೇಲಿನ ಎಲ್ಲ ಪೂಜಾ ವಿಧಿ ವಿಧಾನಗಳು ಮಾತ್ರ ಶ್ರೀಅಲ್ಲಮಪ್ರಭು ದೇವಸ್ಥಾನದ ಅರ್ಚಕರಿಂದ ಮಾತ್ರನಡೆಯುತ್ತಿರುತ್ತವೆ. ಬೆಳಗಿನ ಈ ಎಲ್ಲ ಕಾರ್ಯಕ್ರಮಗಳನ್ನು ತಮ್ಮ ಮನೆಯಲ್ಲಿಯೇ ಕುಳಿತು ಸ್ವರೂಪ ಸಂದರ್ಶನ ಯೂಟ್ಯೂಬ್ ವಾಹಿನಿಯ ಮೂಲಕ ವೀಕ್ಷಿಸುವಂತೆ ದೇವಸ್ಥಾನದ ಅರ್ಚಕರು ಸದ್ಭಕ್ತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಅಲ್ಲಮನ ವಚನದ ಪ್ರಕಾರ ನೆನೆದರೆ ಶಿವನು ಮನದಲ್ಲಿಯೇ ಪ್ರತ್ಯಕ್ಷನಾಗುವನು, ಅದಕ್ಕಾಗಿ ಈ ಶ್ರಾವಣ ಮಾಸದ ಶ್ರೀಅಲ್ಲಮಪ್ರಭುದೇವರ ಪೂಜಾ ಕೈಂಕರ್ಯಗಳು ಎಂತಹ ಪ್ರಸಂಗಗಳಲ್ಲಿಯೂ ನಿಂತಿಲ್ಲ. ಶತಶತಮಾನಗಳಿಂದ ನಡೆದು ಬಂದಿದೆ. ಈಗ ಕೊರೊನಾ ವೈರಾಣುವಿನಿಂದ ಜನರು ಬದುಕುಬೇಕಾಗಿದೆ. ಅದಕ್ಕಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಹೀಗಾಗಿ ಶ್ರೀಅಲ್ಲಮಪ್ರಭುವಿನ ದರ್ಶನ ನಿರ್ಭಂಧಿಸಲಾಗಿದೆ. ಕಾರಣ ಇಷ್ಟೇ ಪ್ರಭುವಿನ ಸೇವೆನಡೆಯಲೇ ಬೇಕು ಆದ್ದರಿಂದ ಎಲ್ಲರೂ ಸಹಕರಿಸಿ ದಯವಿಟ್ಟು ಮನೆಯಲ್ಲಿಯೇ ಇದ್ದು ರಕ್ಷಣೆ ಪಡೆಯುವಂತೆ ಹಾಗೂ ಮನೆಯಲ್ಲಿಯೇ ವಾಹಿನಿಯ ಮೂಲಕ ದರ್ಶನ ಪಡೆಯಬೇಕು ಎಂದು ಪಟ್ಟಣದ ನಾಡಗೌಡರಾದ ಪ್ರವೀಣ ನಾಡಗೌಡ ಹಾಗೂ ದೇವಸ್ಥಾನದ ಸಮಸ್ತ ಅರ್ಚಕರು ಹಾಗೂ ಪಟ್ಟಣದ ಪ್ರಮುಖರು ಸದ್ಭಕ್ತರಲ್ಲಿ ವಿನಂತಿಸಿದ್ದಾರೆ.
ಆನ್‍ಲೈನ್ ಸೇವೆ : ಶ್ರೀಅಲ್ಲಮಪ್ರಭು ದೇವರಿಗೆ ಅಭಿಷೇಕ ರುದ್ರಾಭಿಷೇಕವನ್ನು ಮಾಡಿಸುವವರು ಅರ್ಚಕರ ಖಾತೆಯ ಹೆಸರಲ್ಲಿ ಸೇವಾ ಶುಲ್ಕ ಸಂದಾಯ ಮಾಡಬಹುದು. ಆನ್‍ಲೈನ್‍ದಲ್ಲಿ ಅಭಿಷೇಕ ಜೊತೆಗೆ ನೇರ ದರ್ಶನವನ್ನು ಹಾಗೂ ಪೂಜಾ ಕೈಂಕರ್ಯಗಳನ್ನು ಸಹ ಸ್ವರೂಪ ಸಂದರ್ಶನ ಯೂಟ್ಯೂಬ್ ವಾಹಿನಿಯ ಮೂಲಕ ವೀಕ್ಷಿಸಬಹುದು. ಅರ್ಚಕರ ಖಾತೆ ಸಂಖ್ಯೆ SBI 35635469187. IFSC ಕೋಡ್ SBI0017865 ಈ ಖಾತೆಗೆ ಶುಲ್ಕವನ್ನು ಸಂದಾಯ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಅರ್ಚಕರ ಮೋ. ನಂ 9739572510ಗೆ ಸಂಪರ್ಕಿಸಬಹುದು.
Social Plugin