ತೇರದಾಳ : ಪಟ್ಟಣದ ಜವಳಿ ಬಜಾರಿನಲ್ಲಿಯ ಸೋಂಕು ತಗುಲಿ ವ್ಯಕ್ತಿ ಕಳೆದ ವಾರದಲ್ಲಿ ಮೃತರಾಗಿದ್ದರು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 50ವರ್ಷದ ಮಹಿಳೆ ಹಾಗೂ 25ವರ್ಷದ ಮಹಿಳೆಗೆ ಸೋಂಕು ವಕ್ಕರಿಸಿದೆ. ಅದೇ ಕುಟುಂಬದ 23ವರ್ಷದ ಯುವಕ ಸೇರಿದಂತೆ ಒಂದೇ ಕುಟುಂಬದ ಮೂರು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿ ಅವರ ವರದಿ ಪಾಸಿಟಿವ್ ಬಂದಿತ್ತು. ಮತ್ತೇ ಅವರನ್ನು ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗಿ ಅವರದು ನೆಗಟೀವ ಎಂದು ಬಂದಿದೆ. ಪಾಸಿಟಿವ ಎಂದು ವೈದ್ಯಾಧಿಕಾರಿಗಳು ಮಧ್ಯಾನ 3ಗಂಟೆ ಸುಮಾರಿಗೆ ಮಾಧ್ಯಮದವರಿಗೆ ಪಾಸಿಟಿವ ಎಂದು ಹೇಳಿಕೆಯನ್ನು ಕೊಟ್ಟಿದ್ದರು. ವಾಟ್ಸ್‍ಫ್‍ಗಳಲ್ಲಿ ಅವರ ವರದಿ ನೆಗಟಿವ್ ಬಂದಿರುವ ಕುರಿತು ತಾಲೂಕಾ ವೈದ್ಯಾಧಿಕಾರಿಗಳು ಕೊಟ್ಟಿರುವ ಪ್ರಮಾಣ ಪತ್ರಗಳು ಹರಿದಾಡುತ್ತಿರುವುದನ್ನು ನೋಡಿ ವೈದ್ಯರಿಗೆ ದೂರವಾಣಿ ಮೂಲಕ ಮಾತನಾಡಿದಾಗ ಅದೇ ಅಧಿಕಾರಿಗಳು ನೆಗಟಿವ್ ಬಂದಿದೆ ಎಂದು ಹೇಳುತ್ತಾರೆ. ಇದರಿಂದ ಓದುಗರು ಯಾವುದು ಸರಿ ಯಾವುದು ತಪ್ಪು ಎಂದು ಓದಲು ಗೊಂದಲವನ್ನುಂಟು ಮಾಡಿಕೊಳ್ಳುತ್ತಾರೆ. ಅದಕ್ಕೆ ವೈದ್ಯಾಧಿಕಾರಿಗಳು ವರದಿಯಲ್ಲಿ ಬದಲಾವಣೆ ಕಂಡು ಬಂದರೆ ತಕ್ಷಣ ಅದನ್ನು ಮಾಧ್ಯಮದವರ ಗಮನಕ್ಕೆ ತರುವುದು ಒಳ್ಳೆಯದು. ಇದರಿಂದ ಓದುಗರಿಗೆ ಒಳ್ಳೆಯ ಸಂದೇಶವನ್ನು ನಾವು ನೀವು ಕೊಡಬೇಕಾಗಿರುತ್ತದೆ. ಯಾರದೊ ಮಾಡಿದ ತಪ್ಪಿಗೆ ಯಾರೊ  ಹೊಣೆಯಾಗಬೇಕಾಗುತ್ತದೆ.