ರಬಕವಿ-ಬನಹಟ್ಟಿ ನಗರಸಭೆಯನ್ನು ಎರಡು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿರುವದು.
ನಾಲ್ವರಿಗೆ ಕೊರೊನಾ ಸೋಂಕು: ಶಂಕಿತನ ಶವ ಸಂಸ್ಕಾರ
*ನಗರಸಭೆ ಮತ್ತೇ ಸೀಲ್‍ಡೌನ್
ರಬಕವಿ-ಬನಹಟ್ಟಿ,ಜು30: ರಬಕವಿ-ಬನಹಟ್ಟಿ ಅವಳಿ ನಗರಾದ್ಯಂತ ಕೊರೊನಾ ವೈರಸ್ ನಿತ್ಯ ಕಾಡುತ್ತಿದೆ. ಇದೀಗ ಯಾವದೇ ಸಂಪರ್ಕ ಹೊಂದದಿರುವ ಮನೆಯಲ್ಲಿಯೇ ಕುಳಿತ ಹಿರಿಯ ಜೀವಿಗಳ ಸುತ್ತ ಸುತ್ತುತ್ತಿದೆ.
ರಬಕವಿಯ ಕಂಬಳಿ ಬಜಾರ್‍ನ 65 ವರ್ಷದ ವೃದ್ಧ ಹಾಗು ಬನಹಟ್ಟಿಯ ತಟಗಾರ ಗಲ್ಲಿಯ 67 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮತ್ತಿಬ್ಬರು ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ ಸಂದರ್ಭ ಸೋಂಕು ದೃಢಪಟ್ಟ ವರದಿಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೋಮವಾರ ಪೇಟೆ ಬಸವ ನಗರದ ನಿವಾಸಿ 67 ವರ್ಷದ ವೃದ್ಧ ಬುಧವಾರ ತಡರಾತ್ರಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಆತನಿಗೆ ಕೊರೊನಾ ಸೋಂಕಿನ ಲಕ್ಷಣಗಳಿದ್ದ ಕಾರಣ ರ್ಯಾಪಿಡ್ ಪರೀಕ್ಷೆಯಲ್ಲಿ ಪಾಜಿಟಿವ್ ಕಂಡು ಬಂದ ಕಾರಣ ಎಸ್‍ಓಪಿ(ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೋಶೀಜರ್) ನಿಯಮದಡಿ ಶವವನ್ನು ಕುಟುಂಬಸ್ಥರಿಗೆ ನೀಡದೆ ಸರ್ಕಾರಿ ಸಿಬ್ಬಂದಿಗಳಿಂದ ಶವ ಸಂಸ್ಕಾರ ಮಾಡಿದ ಘಟನೆ ನಡೆದಿದೆ.
ನಗರಸಭೆ ಮತ್ತೆ ಸೀಲ್‍ಡೌನ್: ರಬಕವಿ-ಬನಹಟ್ಟಿ ನಗರಸಭೆಯ ಸಿಬ್ಬಂದಿಯೋರ್ವ ಕಳೆದ ಮೂರು ತಿಂಗಳಿಂದ ಕೊರೊನಾ ವಾರಿಯರ್ ಆಗಿ ಅವಳಿ ನಗರಾದ್ಯಂತ ಸೇವೆ ಸಲ್ಲಿಸಿದ್ದರು. ಇದೀಗ ಅವರಿಗೂ ಕೊರೊನಾ ಒಕ್ಕರಿಸಿದ ಪರಿಣಾಮ ನಗರಸಭೆಯನ್ನು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ.

Social Plugin