ಜನ ಸಾಮಾನ್ಯರನ್ನು ಗೊಂದಲಕ್ಕೀಡು ಮಾಡುವ ಈ ಕೊರೊನಾ ಮುಂದೇನು.....?
ಕೊರೊನಾ ಎಂಬ ಮಾಹಾಮಾರಿ ಚೀನಾ ದೇಶದಲ್ಲಿ ಜನ್ಮ ತಾಳಿ ಜಗತ್ತಿನ ಹಲವು ದೇಶಗಳಲ್ಲಿ ಸಂಚರಿಸಿ ಹಲವಾರು ಜನರ ಬದುಕು ಭವನೆಗಳನ್ನು ಬಲಿ ತಗೆದುಕೊಳ್ಳುವುದರ ಜೊತೆಗೆ ಕೆಲವೊಂದು ಅಮಾಯಕರ ಜೀವವನ್ನೇ ಬಲಿ ತಗೆದುಕೊಂಡಿತು. ಅಲ್ಲಿಂದ ಅದು ಭಾರತ ದೇಶಕ್ಕೆ ಮಾರ್ಚ ತಿಂಗಳಲ್ಲಿ ಕಾಲಿಟ್ಟಾಗ ದೇಶದಲ್ಲಿ ಜನತೆಯು ಶಾಂತಿ, ಸಹನೆಯನ್ನು ಕಳೆದುಕೊಂಡು ಜನಸಾಮಾನ್ಯರ ಜೊತೆಗೂಡಿ ಬಡವ ಬಲ್ಲಿದರೆನ್ನದೆ ಎಲ್ಲರಲ್ಲಿಯೂ ಕೊರೊನಾ ವೈರಸ್ ಸೇರಿಕೊಂಡು ಜೀವ ಬಲಿ ತಗೆದುಕೊಳ್ಳಲು ಪ್ರಾರಂಭಿಸಿತು. ಅದಕ್ಕೆ ಸರಕಾರ ವೈರಸ್ ತಡೆಗಟ್ಟಲು ಹಲವಾರು ಕ್ರಮಗಳನ್ನು ಅನುಸರಿಸಿತು. ಆ ಕ್ರಮಗಳಲ್ಲಿ ಮುಖ್ಯವಾಗಿ ಲಾಕ್‍ಡೌನ್, ಜನತಾ ಕಪ್ರ್ಯೂದಂತಹ ಅನೇಕ ಕ್ರಮಗಳನ್ನು ಜಾರಿಗೆ ತಂದಿತು. ಇವುಗಳ ಜೊತೆಗೆ ಸಾರಿಗೆ ಸಂಚಾರ ರದ್ದು ಪಡಿಸಿತು. ಸರಕಾರ ತನಗೆ ಬರಬೇಕಾಗಿದ್ದ ಆದಾಯವನ್ನು ಲೆಕ್ಕಿಸದೇ ಜನರ ರಕ್ಷಣೆಯೇ ಮುಖ್ಯವೆಂದು ತನ್ನದೆಲ್ಲ ಬೇಡಿಕೆಯನ್ನು ಬದಿಗಿಟ್ಟು ಜನತೆಯ ಸಂರಕ್ಷಣೆಗೆ ಪಣ ತೊಟ್ಟಿತು.
ಸರಕಾರದ ಆದೇಶದಂತೆ ಕೊರೊನಾ ಕೇರ್ ಸೆಂಟರ್ ಗಳು ಜಿಲ್ಲಾ ಹಂತದಲ್ಲಿ ಪ್ರಾರಂಭಗೊಂಡವು ನಂತರ ತಾಲೂಕಾ ಸ್ಥಳಗಳಲ್ಲಿಯೂ ಈ ಕೇಂದ್ರಗಳು ತಮ್ಮ ಕೆಲಸವನ್ನು ಪ್ರಾರಂಭಿಸಿ ಜನತೆಯ ಪ್ರಾಣ ರಕ್ಷಣೆಗೆ ಹಗಲಿರುಳು ಶ್ರಮ ಪಡುತ್ತಿವೆ. ನಗರ, ಪಟ್ಟಣದ, ಗ್ರಾಮಗಳಲ್ಲಿ ಜನರಿಗೆ ಜಾಗೃತೆಯನ್ನು ಮೂಡಿಸಲು ಆಶಾ ಕಾರ್ಯಕರ್ತೆಯರು, ಡಾಕ್ಟರ್ ಗಳು , ಪೋಲಿಸ್ ಇಲಾಖೆಯ ಅಧಿಕಾರಿಗಳು, ಪುರಸಭೆ, ನಗರಸಭೆ, ಗ್ರಾಮಪಂಚಾಯತಿ ಅಧಿಕಾರಿಗಳು ಕೊರೊನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದುದು. ಆದರೆ ಕೊರೊನಾ ವಾರಿಯರ್ಸ್ ಮಹಾಮಾರಿ ಕೊರೊನಾಗೆ ಬಲಿಯಾಗುತ್ತಿರುವುದು ದುಃಖದ ಸಂಗತಿ ಜೊತೆಗೆ ಆದರೂ ವಾರಿಯರ್ಸ್‍ಗಳಿಗೆ ನೆಮ್ಮದಿ ಇಲ್ಲ.
ಪ್ರೀಯ ಓದುಗ ಮಿತ್ರರೇ ಇಷ್ಟೇಲ್ಲ ವಿಷಯಗಳು ನಮಗೆ ಗೊತ್ತಿದ್ದರೂ ಇದರೊಳಗಿನ ಹಲವಾರು ಪ್ರಶ್ನೆಗಳು ಸಾರ್ವಜನಿಕ ವಲಯಗಳಲ್ಲಿ ಹುಟ್ಟುತ್ತಲೆ ಇವೇ. ಆ ಪ್ರಶ್ನೆಗಳು ಯಾವುವು? ಯಾರ ಮೇಲೆ ಪ್ರಶ್ನೆಗಳು? ಏಕೆ ಪ್ರಶ್ನೆಗಳು? ಹೀಗೆ ಹಲವು.... ಹಾಗಾದರೆ ಆ ಪ್ರಶ್ನೆಗಳು ಯಾವವು ಎಂದು ತಿಳಿಯೋಣವೇ?
1) ಕೊರೊನಾ ಸಂಭಂದ ಸರಕಾರ ತಗೆದುಕೊಂಡ ನಿರ್ಧಾರಗಳು ಸರಿಯೋ ತಪ್ಪೋ? 2) ಕೊರೊನಾ ಒಂದು ಮಾರಕ ರೋಗನಾ? ಅಥವಾ ಹಲವು ಆಯುರ್ವೇದ ವೈದ್ಯರು ಹೇಳುವ ಪ್ರಕಾರ ಇದಕ್ಕೆ ಔಷಧ ದೊರಕಿದೆಯಾ? 3) ವಿಶ್ವ ಆರೋಗ್ಯ ಸಂಸ್ಥೆಯನ್ನು ನಂಬಬೇಕೋ ಬೇಡವೋ? 4) ವಿರೋಧ ಪಕ್ಷಗಳು ಸರಕಾರದ ಮೇಲೆ ಮಾಡುತ್ತಿರುವ ಕೊರೊನಾ ವಿಷಯಗಳ ಆರೋಪಗಳನ್ನು ನಂಬಬೇಕಾ ಬಿಡಬೇಕಾ? ತೀರಾ ಇತ್ತಿಚೆಗೆ ಹೊಸದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರಯತ್ತಿದೆ. ಕೊರೊನಾ ಪರೀಕ್ಷೆ ವರದಿ ಪಾಸಿಟಿವ್ ನೆಗಟಿವ್ ಬಗ್ಗೆ. ಇಲ್ಲಿ ಅಧಿಕಾರಿಗಳು ಎಡುವುತ್ತಿದ್ದಾರೋ? ಅಥವಾ ಸರಕಾರ ಎಡುವುತ್ತಿದೆಯೋ? ಗಂಟಲು ದ್ರವ ಪರೀಕ್ಷೆ ಸರಿಯೋ? ಅಥವಾ ರ್ಯಾಪಿಡ್ ಪರೀಕ್ಷೆಯು ಸರಿಯೋ? ಜನರಲ್ಲಿ ಮಾತ್ರ ಗೊಂದಲ... ಇಲ್ಲಿ ಹಲವಾರು ಪ್ರಕರಣಗಳನ್ನು ನಿದರ್ಶನವಾಗಿಟ್ಟುಕೊಂಡರೆ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡ ನಂತರ ಪಾಸಿಟಿವ್ ಬಂದ ವ್ಯಕ್ತಿ ಮತ್ತೆ ಕೆಲವು ಗಂಟೆಗಳ ನಂತರ ರ್ಯಾಪೀಡ್ ಪರೀಕ್ಷೆ ಮಾಡಿಸಿಕೊಂಡಾಗ ನೆಗಟಿವ್ ಬರುತ್ತಿರುವುದು ಜನರನ್ನು ಗೊಂದಲಕ್ಕೀಡು ಮಾಡಿದೆ. ಒಟ್ಟಿನಲ್ಲಿ ಈ ಕೊರೊನಾ ಏನು ಮಾಡುತ್ತಿದೆ ಎಂದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇಲ್ಲಿ ಸಾರ್ವಜನಿಕರು ಉಹಾಪೋಹಗಳಿಗೆ ಕಿವಿಗೊಡದೆ ನಿಮ್ಮ ರಕ್ಷಣೆಯನ್ನು ನೀವೆ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಇದನ್ನು ತಡೆಗಟ್ಟಲು ಔಷಧಿ ಸಿಗುವವರೆಗೂ ಬೇರೆ ಯಾವುದೇ ಉಪಾಯವಿಲ್ಲ. ಅದಕ್ಕೆ ಒಂದೇ ಮಾರ್ಗ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಮೇಲಿಂದ ಮೇಲೆ ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಜರ್ ಬಳಸಿ ಕೈ ತೊಳೆಯುತ್ತಿರುವುದು. ಕೊರೊನಾ ತಡೆಗಟ್ಟಲು ಒಂದೇ ಮಾರ್ಗ. ಮನೆಯಲ್ಲಿಯೇ ಇರಿ ಕೊರೊನಾದಿಂದ ರಕ್ಷಣೆ ಪಡೆಯಿರಿ. ಆದರೂ ಇನ್ನೂ ಯಾವ ಯಾವ ಪ್ರಶ್ನೆಗಳನ್ನು ಸೃಷ್ಟಿಸುವುದೋ ಈ ಕೊರೊನಾ?.........
Social Plugin