ರಬಕವಿಯ ಪ್ರಮುಖ ರಸ್ತೆಯಾಗಿದ್ದ ಈಶ್ವರ ಸಣಕಲ್ ರಸ್ತೆಯ ವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ವ್ಯಕ್ತಿಯಬ್ಬರಿಗೆ ಕೊರೊನಾ  ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಸ್ತೆಯನ್ನು ಕಾಂಟೈನಮೆಂಟ ಝೋನ್ನ್ನಾಗಿ ಪರಿವರ್ತಿಸಲಾಯಿತು.
ರಬಕವಿ: ಪ್ರಮುಖ ಮಾರುಕಟ್ಟೆ ಕಂಟೈನಮೆಂಟ್ ಝೋನ್
ರಬಕವಿ-ಬನಹಟ್ಟಿ,ಜು22: ರಬಕವಿಯ ಪ್ರಮುಖ ಮಾರುಕಟ್ಟೆಯಾದ ಈಶ್ವರ ಸಣಕಲ್ ರಸ್ತೆಯ ವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಸ್ತೆಯನ್ನು ಬುಧವಾರ ಕಂಟೈನ್ಮೆಂಟ್ ಝೋನನ್ನಾಗಿ ಮಾಡಲಾಯಿತು ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಅವರು ಬುಧವಾರ ಪತ್ರಿಕೆ ಜೊತೆಗೆ ಮಾತನಾಡಿ, ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಾಗಲಕೋಟೆಗೆ ಸ್ಥಳಾಂತರಿಸಲಾಗಿದೆ ಎಂದು ಜಾಧವ ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ.ಮುಗಳಖೋಡ, ಸಹಾಯಕ ಆರೋಗ್ಯ ನಿರೀಕ್ಷಕ ರಾಜಕುಮಾರ ಹೊಸೂರ ಸೇರಿದಂತೆ ಕಂದಾಯ ಇಲಾಕೆಯ ಅಧಿಕಾರಿಗಳು ಮತ್ತು ನಗರಸಭೆಯ ಸಿಬ್ಬಂದಿ ವರ್ಗದವರು ಇದ್ದರು