ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಕ್ಕರಿಸಿದ ವೈರಾಣು
ತೇರದಾಳ : ಕೋವಿಡ್-19 ರಣಕೇಕೆ ಮುಂದು ವರೆದಿದ್ದು ಇಂದು ಪಟ್ಟಣದ ಏಳು ಜನರಿಗೆ ಕೊರೊನಾ ಧೃಡಪಟ್ಟಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸುದರ್ಶನ್ ನಿಡೋಣಿ ತಿಳಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ 26ವರ್ಷದ ವಯಸ್ಸಿನ ಇಬ್ಬರು ಜನ ಸಿಬ್ಬಂದಿಗೆ ಹಾಗೂ ಅವರ ಕುಟುಂಬದ ಸಂಬಂಧಿಕರೊಬ್ಬರಿಗೆ ಕೊರೊನಾ ಪಾಸಿಟೀವ್ ಅಂಟಿಕೊಂಡಿದ್ದು ಹಾಗೂ ತೇರದಾಳ ಪೋಲಿಸ್ ಠಾಣೆಯ 46ವರ್ಷ ವಯಸ್ಸಿನ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ರಬಕವಿಯ ಓಬಿಸಿ ಹಾಸ್ಟೇಲ್‍ದಲ್ಲಿ ಕ್ವಾರಂಟೈನ್‍ನಲ್ಲಿರುವ ಇಬ್ಬರಿಗೆ ಕೊರೊನಾ ಪಾಸಿಟಿವ್ ತಿಳಿದು ಬಂದಿದೆ.
ಪಟ್ಟಣದಲ್ಲಿ ಮೊದಲು 6ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದರೆ, ಇಂದು ಪೋಲಿಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇಬ್ಬರಿಗೆ ಮತ್ತು ಅವರ ಸಂಬಂಧಿಕರೊಬ್ಬರಿಗೆ ಮತ್ತು ಕ್ವಾರಂಟೈನದಲ್ಲಿದ್ದ ಇಬ್ಬರಿಗೆ ಕೊರೊನಾ ವಕ್ಕರಿಸಿದೆ. ಪಟ್ಟಣದಲ್ಲಿ ಇಲ್ಲಿಯವರೆಗೆ ಒಟ್ಟಾರೆಯಾಗಿ 13ಜನರಿಗೆ ಕೊರೊನಾ ಅಂಟಿಕೊಂಡಂತಾಗಿದೆ. ಇಂದು ಸೋಂಕಿತ ಏಳು ಜನರನ್ನು ಬಾಗಲಕೋಟ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಯಾನಿಟೈಸರ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಕೊರೊನಾ ಮುಂಜಾಗೃತೆ ಎಲ್ಲ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಡಾ.ಸುದರ್ಶನ್ ನಿಡೋಣಿ ತಿಳಿಸಿದ್ದಾರೆ.
Social Plugin