ತೇರದಾಳ ಪಟ್ಟಣದ ಶ್ರೀಅಲ್ಲಮಪ್ರಭು ದೇವಸ್ಥಾನದ ಶ್ರಾವಣ ಮಾಸದ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಕುರಿತು ಪಟ್ಟಣದ ಧನಿಗಳಾದ ಪ್ರವೀಣ ನಾಡಗೌಡ ಮಾತನಾಡಿದರು.

ಶ್ರೀಅಲ್ಲಮಪ್ರಭು ದೇವಸ್ಥಾನದ ಶ್ರಾವಣ ಮಾಸದ ಕಾರ್ಯಕ್ರಮಗಳು ಇರುವುದಿಲ್ಲ.

ತೇರದಾಳ : ಹೆಮ್ಮಾರಿ ಕೋವಿಡ್-19 ವೈರಸ್ ನಮ್ಮ ದೇಶವನ್ನು ಕಾಡುತ್ತಿದೆ. ಅದೇ ಪ್ರಕಾರ ನಮ್ಮ ಪಟ್ಟಣದಲ್ಲಿಯೂ ಸಹ ಐದಾರು ಜನರಿಗೆ ಸೋಂಕು ತಗುಲಿರುವುದರಿಂದ ಐತಿಹಾಸಿಕ ಶ್ರೀಅಲ್ಲಮಪ್ರಭು ದೇವಸ್ಥಾನದ ಟ್ರಸ್ಟ್ ಹಾಗೂ ಸಮಸ್ತ ಅರ್ಚಕರ ವತಿಯಿಂದ ಶ್ರಾವಣ ಮಾಸದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ ಎಂದು ಪಟ್ಟಣದ ಧನಿಗಳಾದ ಪ್ರವೀಣ ನಾಡಗೌಡ ಹೇಳಿದರು.

  ಪರಸ್ಥಳದಿಂದ ಬರುವವರಿಗೂ ಹಾಗೂ ಸ್ಥಳೀಯ ಭಕ್ತಾಧಿಗಳಿಗೂ ಈ ಮೂಲಕ ತಿಳಿಸುವುದೇನೆಂದರೆ ಶ್ರಾವಣ ಮಾಸದ ಎಲ್ಲ ಕಾರ್ಯಕ್ರಮಗಳು ರದ್ದಾಗಿದ್ದರಿಂದ ಯಾರೂ ದೇವಸ್ಥಾನಕ್ಕೆ ಬರಬಾರದು ಹಾಗೂ ದೇವಸ್ಥಾನದ ಯಾವುದೇ ಬಾಗಿಲುಗಳನ್ನು ತೆರೆದಿರುವುದಿಲ್ಲ. ಮನೆಯಲ್ಲಿಯೇ ಇದ್ದು ಶ್ರೀಅಲ್ಲಮಪ್ರಭುದೇವರ ಸ್ಮರಣೆ ಮಾಡಬೇಕು. ಪ್ರತಿ ವರ್ಷ ನಡೆಯುವ ದೀಡ ನಮಸ್ಕಾರ, ಅನ್ನ ಪ್ರಸಾದ, ತೆಂಗಿನಕಾಯಿ ಪ್ರಸಾದ ಸೇರಿದಂತೆ ಇನ್ನಿತರ ಯಾವುದೇ ಸೇವಾ ಕಾರ್ಯಕ್ರಮಗಳು ನಡೆಯುವುದಿಲ್ಲ. ರಾಜ್ಯ, ಬೇರೆ ರಾಜ್ಯಗಳಿಂದ ಬರುವ ಹಾಗೂ ಪಟ್ಟಣದ ಸುತ್ತಮುತ್ತಲಿನ ಭಕ್ತಾಧಿಗಳು ಸಹಕರಿಸಬೇಕು. ಟ್ರಸ್ಟ್ ವತಿಯಿಂದ ದಿನನಿತ್ಯ ಅಭಿಷೇಕ, ರುದ್ರಾಭಿಷೇಕ, ಹಾಗೂ ಸೇವಾ ಕಾರ್ಯಕ್ರಮಗಳು ಅರ್ಚಕರಿಂದ ಮಾತ್ರ ನಡೆಯುತ್ತವೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧವಿರುತ್ತದೆ. ಹಾಗೂ ಈ ಕುರಿತು ಸರಕಾರದ ಆದೇಶವು ಸಹ ಇರುತ್ತದೆ ಎಂದರು. 

 ಆನ್ ಲೈನ್ ಸೇವೆ :  ಶ್ರೀಅಲ್ಲಮಪ್ರಭುದೇವರಿಗೆ ಅಭಿಷೇಕ ಹಾಗೂ ರುದ್ರಾಭಿಷೇಕ ಮಾಡಿಸುವವರು ಅರ್ಚಕರ ಖಾತೆಯ ಹೆಸರಲ್ಲಿ ಸೇವಾ ಶುಲ್ಕ ಸಂದಾಯ ಮಾಡಬಹುದು. ಆನ್‍ಲೈನದಲ್ಲಿ ಅಭಿಷೇಕ ಜೊತೆಗೆ ದೇವರ ದರ್ಶನವನ್ನು ಹಾಗು ಪೂಜಾ ಕೈಂಕರ್ಯಗಳನ್ನು ಸಹ ಸ್ವರೂಪ ಸಂದರ್ಶನ ಯೂ ಟ್ಯೂಬ್ ಚಾನಲ್‍ದಲ್ಲಿ ಲೈವ್ ಮೂಲಕ ವೀಕ್ಷಿಸಬಹುದು. ಅರ್ಚಕರ ಖಾತೆ ಸಂಖ್ಯೆ, ಎಸ್‍ಬಿಆಯ್-35635469187, ಆಯ್‍ಎಫ್‍ಎಸ್‍ಸಿ ಕೋಡ್ ಎಸ್‍ಬಿಆಯ್ 0017865 ಇಲ್ಲಿ ಹಣವನ್ನು ತುಂಬಬಹುದು. ಹೆಚ್ಚಿನ ಮಾಹಿತಿಗಾಗಿ ಅರ್ಚಕರ ಮೋ ನಂ. 9739572510 ಗೆ ಸಂಪರ್ಕಿಸಬಹುದು.

 ಈ ಸಂದರ್ಭದಲ್ಲಿ ಮಗಯ್ಯ ತೆಳಗಿನಮನಿ, ಮಲ್ಲಪ್ಪ ಜಮಖಂಡಿ, ರಾಮಣ್ಣ ಹಿಡಕಲ, ಪ್ರಭು ಬಾಗಿ, ಅರ್ಚಕರಾದ ಆನಂದ ಹಿತ್ತಲಮನಿ, ಗುಹೇಶ್ವರ ಹಿತ್ತಲಮನಿ, ಮಗಯ್ಯ ಹಿತ್ತಲಮನಿ, ಪರಯ್ಯ ಹಿತ್ತಲಮನಿ ಸೇರಿದಂತೆ ಸಮಸ್ತ ಅರ್ಚಕರು ಇದ್ದರು.