ಬನಹಟ್ಟಿಯಲ್ಲಿ ನಡೆದ ಡಾ.ಸ.ಜ.ನಾಗಲೋಟಿಮಠ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಸ್ಥಳೀಯ ತೋಟದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಂಕರ ಪಾಲಭಾವಿ ಅವರಿಗೆ ಪ್ರದಾನ ಮಾಡಲಾಯಿತು.
ಕರ್ತವ್ಯನಿಷ್ಠ, ಪ್ರಾಮಾಣಿಕ, ಶ್ರದ್ಧೆಯ ವ್ಯಕ್ತಿ ಡಾ.ಸಜನಾ
ರಬಕವಿ-ಬನಹಟ್ಟಿ,ಜು20:ಅಂತರರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ.ಸ.ಜ.ನಾಗಲೋಟಿಮಠ ಕರ್ತವ್ಯ ನಿಷ್ಠರು, ಪ್ರಮಾಣಿಕರು, ಕೆಲಸದ ಬಗ್ಗೆ ಅಪಾರ ಶ್ರದ್ಧೆಯುಳ್ಳವರಾಗಿದ್ದರು. ಅಂತಯೇ ಬೆಳಗಾವಿಯ ಜೆಎನ್ ಮೆಡಿಕಲ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ಯಾಥಾಲಜಿ ಮ್ಯೂಸಿಯಂ ಮತ್ತು ವಿಜಯಪುರದ ಬಿಎಲ್ಡಿಎ ಮೆಡಿಕಲ್ ಕಾಲೇಜಿನಲ್ಲಿ ದೇಶದಲ್ಲಿಯೇ ದೊಡ್ಡದಾದ ದೇಹದ ಹರಳುಗಳ ಮ್ಯೂಸಿಮ್‍ಂ ನಿರ್ಮಾಣಗೊಂಡವು ಎಂದು ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪಿಯು ಕಾಲೇಜಿನ ಪ್ರಾಚಾರ್ಯ ಪೆÇ್ರ.ಬಸವರಾಜ ಕೊಣ್ಣೂರ ತಿಳಿಸಿದರು.
ಅವರು ಸೋಮವಾರ ಸ್ಥಳೀಯ ಮಕ್ಕಳ ಸಂಗಮವು ಕೊಡಮಾಡುವ ಡಾ.ಸ.ಜ.ನಾಗಲೋಟಿಮಠ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಉಪನ್ಯಾಸ ನೀಡಿ, ಡಾ.ಸ.ಜ.ನಾಗಲೋಟಿಮಠ ದಕ್ಷ ಆಡಳಿತಗಾರರು, ಉತ್ತಮ ವಾಗ್ಮಿಗಳು, ವೈದ್ಯ ವಿಜ್ಞಾನಿ, ಸಂಶೋಧಕ, ಬರಹಗಾರ, ಸಂಘಟಕ ಎಲ್ಲಕ್ಕಿಂತ ಮುಖ್ಯವಾಗಿ ಅವರು ವೈದ್ಯರುಗಳ ವೈದ್ಯರಾಗಿದ್ದರು ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಶಂಕರ ಪಾಲಭಾವಿ ಮಾತನಾಡಿ, ಡಾ.ಸಜನಾ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿ ಏಳ್ಗೆಗೆ ಶ್ರಮಿಸುವುದಾಗಿ ತಿಳಿಸಿದರು. ಮಲಕಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯ್ತಿ ಸದಸ್ಯ ಹನಮಂತ ತೇರದಾಳ, ಭೀಮಶಿ ಪಾಟೀಲ, ಗುರ್ಲಹೊಸೂರ, ಕಿರಣ ಆಳಗಿ, ಮಲ್ಲಿಕಾರ್ಜುನ ತುಂಗಳ ಇದ್ದರು. ಡಾ.ಎಸ್.ಎಸ್.ಖಾನಾಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪೆÇ್ರ.ಎಫ್.ಬಿ.ತಳವಾರ ವಂದಿಸಿದರು.
- ಶೀಘ್ರ ಸುದ್ದಿ ಹಾಗೂ ಜಾಹೀರಾತುಗಳಿಗಾಗಿ
ಸಂಪರ್ಕಿಸಿ ಮತ್ತು ಫಾಲೋ ಹಾಗೂ ಸಬ್ಸ್ಕ್ರೈಬ್ ಮಾಡಿ

Social Plugin