ವರದಿ: ಪ್ರಭು ಜೈನರ

ತೇರದಾಳ: ಪಟ್ಟಣದ  ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶ್ರೀ ಜಿನಸೇನಾಚಾರ್ಯ ವಿದ್ಯಾ ಮಂಡಳದ ಜೆ ವಿ ಎಂ ಪಾಲಿಟೆಕ್ನಿಕ್ ನವರು ಮತ್ತು ಜೆವಿಎಮ್ ಪಿಯು ಕಾಲೇಜಿನವರು ಕೋವಿಡ್ 19 ಸಂದರ್ಭದಲ್ಲಿ ಎಸ್ಎಂ ಪ್ರೌಢಶಾಲೆ, ಎಸ್ ಪಿ  ಪ್ರೌಢಶಾಲೆ ಮತ್ತು ಶ್ರೀ ಸಿದ್ಧೇಶ್ವರ ಪ್ರೌಢಶಾಲೆಗಳ  ಎಸ್ ಎಸ್ ಎಲ್ ಸಿ  ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಸ್ಯಾನಿಟೈಜರ್ ಸಿಂಪಡನೆ ಯಂತ್ರವನ್ನು ಅಳವಡಿಕೆ ಮಾಡಿ ವಿದ್ಯಾರ್ಥಿಗಳಿಗೆ ಸೋಂಕು ತಗಲದಂತೆ ಮುಂಜಾಗ್ರತಾ ಕ್ರಮವನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡು,  ಪಾಲಕರ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಈ ಕಾರ್ಯಕ್ಕೆ  ಮೂರು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು  ಸಂಸ್ಥೆಯ ಆಡಳಿತ ಮಂಡಳಿಯವರು ಮತ್ತು ಊರಿನ ಗಣ್ಯರು ಹಾಗೂ ಹಿರಿಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ಜೆ ವಿ ಎಂ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ವಿಜಯ ಶಿಗ್ಲಿ ಮತ್ತು ಜೆವಿಎಮ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ ಕುಳ್ಳಿ ಹಾಗೂ ಎರಡು ವಿಭಾಗಗಳ ಸಿಬ್ಬಂದಿಯವರು ಉಪಸ್ಥಿತರಿದ್ದರು. 



- ನಿಮ್ಮ ಜಾಹೀರಾತುಗಳಿಗಾಗಿ 
ಸಂಪರ್ಕಿಸಿ +91 9902523698