ಹಿಪ್ಪರಗಿ ಗ್ರಾಮದ ಲಕ್ಕವ್ವದೇವಿ ದೇವಸ್ಥಾನ ಹತ್ತಿರದ ಮನೆಗಳ ರಸ್ತೆಗೆ ಮುಳ್ಳಿನ ಕಂಟಿ ಹಾಕಿ ಬಂದ್ ಮಾಡಿರುವದು.
ವೃದ್ಧೆಗೆ ಕೊರೊನಾ: ಭಯದಲ್ಲಿ ಹಿಪ್ಪರಗಿ ಗ್ರಾಮಸ್ಥರು
ರಬಕವಿ-ಬನಹಟ್ಟಿ,ಜು4: ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 94 ವರ್ಷದ ವೃದ್ಧೆಗೆ ಅಂತ್ಯ ಸಂಸ್ಕಾರದ ನಂತರ ಕೊರೊನಾ ಪಾಸಿಟಿವ್ ತಿಳಿದು ಬಂದ ಕಾರಣ ಈ ಕಾರ್ಯದಲ್ಲಿ ತೊಡಗಿದ್ದ ಗ್ರಾಮದ 67 ಜನರನ್ನು ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ವೈದ್ಯರ ಯಡವಟ್ಟಿನಿಂದ ವಿಜಯಪುರದ ಖಾಸಗಿ ಆಸ್ಪತ್ರೆಯಿಂದ ಶವವನ್ನು ತಂದು ಹಿಪ್ಪರಗಿ ಗ್ರಾಮದಲ್ಲಿ ಗುರುವಾರ ರಾತ್ರಿ ಶವಸಂಸ್ಕಾರ ಮಾಡಲಾಗಿತ್ತು. ಇದೀಗ ಇಡೀ ಗ್ರಾಮವೇ ಭಯದಿಂದ ಕೂಡಿದ್ದು, ಬಹುತೇಕ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದಲ್ಲದೆ ಸ್ವಯಂ ಪ್ರೇರಿತವಾಗಿ ಸೀಲ್‍ಡೌನ್ ಮಾಡಿಕೊಂಡಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದ ವೃದ್ಧೆಯ ಮನೆಗೆ ಸಂಚರಿಸುವ ರಸ್ತೆ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
13 ಜನರ ಪರೀಕ್ಷೆ: ಶುಕ್ರವಾರ ಮೃತ ವೃದ್ಧೆಯ 13 ಜನ ಕುಟುಂಬಸ್ಥರ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆಯನ್ನು ಸ್ವ್ಯಾಬ್‍ಗೆ ಕಳಿಸಲಾಗಿದ್ದು, ಸೋಮವಾರ ವರದಿ ಬರಲಿದೆ.
ಮತ್ತೊಮ್ಮೆ ಸ್ವ್ಯಾಬ್ ಪರೀಕ್ಷೆ: ಬನಹಟ್ಟಿ ಲಕ್ಷ್ಮೀ ನಗರದ ಒಂದೇ ಕುಟುಂಬದ 6 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದ ಕಾರಣ ಕಳೆದ ಜೂನ್ 22 ರಿಂದ ಸುಮಾರು 55 ಕ್ಕೂ ಅಧಿಕ ಜನರನ್ನು ರಬಕವಿಯ ಬಿಸಿಎಂ ಹಾಸ್ಟೇಲ್ ಹಾಗು ಬನಹಟ್ಟಿ ಉರ್ದು ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.
ಎಲ್ಲರ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆ ಕಳಿಸಲಾಗಿ ನೆಗೆಟಿವ್ ಬಂದಿತ್ತಾದರೂ ಮತ್ತೊಂದು ಬಾರಿ ಎಲ್ಲರದ್ದೂ ಸ್ವ್ಯಾಬ್ ಪರೀಕ್ಷೆಗೆ ಕಳಿಸಲು ತಾಲೂಕಾಡಳಿತ ತಯಾರಾಗಿದ್ದು, ಬಹುತೇಕ ಸೋಮವಾರ ಪರೀಕ್ಷೆಯ ವರದಿ ಬರಲಿ.


- ನಿಮ್ಮ ಜಾಹೀರಾತುಗಳಿಗಾಗಿ 
    ಸಂಪರ್ಕಿಸಿ +91 9902523698