ತೇರದಾಳ : ಕೊರೊನಾಗೆ ಮತ್ತೋಂದು ಬಲಿ
ತೇರದಾಳ : ಕೊರೊನಾ ಅಟ್ಟಹಾಸಕ್ಕೆ ಪಟ್ಟಣದ ಭೂಮಾತಾ ಚಿತ್ರ ಮಂದಿರ ಹತ್ತಿರ 61 ವರ್ಷದ ಪುರುಷ ಸೋಂಕಿತ ಬಲಿಯಾಗಿದ್ದಾನೆ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ತಿಳಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್‍ಗೆ ಪಟ್ಟಣದಲ್ಲಿ ಒಟ್ಟು ಇಲ್ಲಿಯವರೆಗೆ ಮೂವರು ಬಲಿಯಾದಂತಾಗಿದೆ. ಕಳೆದ ಮೂರುನಾಲ್ಕು ದಿನಗಳ ಹಿಂದೆ ಕೆಮ್ಮು ,ಜ್ವರ ಹಾಗೂ ಉಸಿರಾಟ ತೊಂದರೆ ಇದ್ದ ಕಾರಣ 61ವರ್ಷದ ಪುರುಷ ಸೋಂಕಿತ ತಾನೇ ಬಾಗಲಕೋಟೆಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ ಸೋಂಕು ಅಂಟಿಕೊಂಡಿದ್ದು ತಿಳಿದಾಗ ಅಲ್ಲಿಯೇ ಅವರು ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗಿನ ಜಾವ ಮೃತರಾದರು ಎಂದು ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ಹಾಗೂ ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ ತಿಳಿಸಿದ್ದಾರೆ. ಅವರನ್ನು ಕೋವಿಡ್ ನಿಯಮದ ಪ್ರಕಾರ ಬಾಗಲಕೋಟೆಯಲ್ಲಿಯೇ ಶವಸಂಸ್ಕಾರ ಮಾಡಲಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಚಿಮ್ಮಡದ ಬಿಸಿಎಮ್ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಗುರುವಾರ ಕೋವಿಡ್ ಆಸ್ಪತ್ರೆಗೆ ಧಾಖಲಿಸಲಾದ ಮೂರು ಜನರ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 21ಜನರನ್ನು ಚಿಮ್ಮಡದ ಬಿಸಿಎಮ್ ವಸತಿ ನಿಲಯದಲ್ಲಿ ಗುರುವಾರ ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಅವರು ವಾಸಿಸುತ್ತಿದ್ದ ಪ್ರದೇಶವನ್ನು ಬಿದಿರುಗಳನ್ನು ಕಟ್ಟಿ ಸೀಲ್‍ಡೌನ್ ಮಾಡಲಾಗಿದೆ. ಮತ್ತು ಸ್ಯಾನಿಟೈಜರ್‍ನ್ನು ಸಿಂಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Social Plugin