ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಯೋಗಿ ಮಹಾದೇವರು ಸ್ಥಾಪಿಸಿದ ಶ್ರೀ ಗಿರೀಶ ಆಶ್ರಮದ ಭೂಮಿ ಪೂಜೆ....
ರಬಕವಿ ಬನಹಟ್ಟಿ : ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ರೂವಾರಿ, ಸರ್ವೋದಯದ ಹರಿಕಾರ.... ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಕ್ರಾಂತಿಯೋಗಿ  ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜೀ ಯವರು 1968 ರಲ್ಲಿ ಬನಹಟ್ಟಿಯಲ್ಲಿ ಶ್ರೀ ಗಿರೀಶ ಆಶ್ರಮ ಪ್ರಾರಂಭಿಸಿದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಅವರು ಸ್ಥಾಪಿಸಿದ ಗಿರೀಶ ಆಶ್ರಮಗಳ ಸಂಖ್ಯೆ  ಸುಮಾರು 400.ಇವುಗಳಲ್ಲಿ ಅವರು ಹುಬ್ಬಳ್ಳಿ ಮತ್ತು ಬನಹಟ್ಟಿ ಆಶ್ರಮಗಳಲ್ಲಿ ಹೆಚ್ಚು ತಂಗುತ್ತಿದ್ದರು. 1971-72 ರಲ್ಲಿ ದೇಶದಲ್ಲಿ ಮಾರಕ ಬರಗಾಲ ಬಿದ್ದಾಗ ಮಹಾದೇವರು ಅನೇಕ ಕಡೇ ಗಂಜಿ ಕೇಂದ್ರ ತೆರೆದು ಸಮಾಜದ ಜನರಿಗೆ ನಿಜ ದೇವರೆನಿಸಿದ ಕೀರ್ತಿ ಅವರದು,  ಈ ಬನಹಟ್ಟಿ ಆಶ್ರಮ ಆ ಹೊತ್ತಿನಲ್ಲಿ ಬಡವರ, ದೀನ-ದಲಿತರ ಸಮಾಜ ಸೇವೆಯ  ಒಂದು ಕೇಂದ್ರವೇ ಎನಿಸಿತ್ತು.ಅಂದು ಈ ಆಶ್ರಮ ನಿರ್ಮಿಸಲು ಹಿರಿಯ ಸ್ವಾತಂತ್ರ್ಯ ಸೇನಾನಿ ಕೈ.ಶ್ರೀ ಸ.ಸ. ಭಾಸ್ಕರಪ್ಪ. ಜೀ.ಕೋಪರ್ಡೆ ಮಹಾರಾಜರು ಜಾಗವನ್ನು ನೀಡಿದ್ದರು. ಈಗ  ಈ ಆಶ್ರಮ ಶಿಥಿಲಾವಸ್ಥೆಗೆ ಬಂದ ಕಾರಣ ಇದರ ಜೀರ್ಣೋದ್ದಾರ ಕಾರ್ಯವನ್ನು ಸದ್ಗುರುವಿನ ಪೂಜೆಯೊಂದಿಗೆ  ಇಂಚಗೇರಿ ಸಂಪ್ರದಾಯದ ಶ್ರೀ ಸ.ಸ.ಪ್ರಭುಜೀ ಮಹಾರಾಜರು  ಇಂದು ಚಾಲನೆ ನೀಡಿದರು. ಬನಹಟ್ಟಿಯ ಶ್ರೀ ಗಿರೀಶ ಆಶ್ರಮ ಹೊಸ ಕಟ್ಟಡದೊಂದಿಗೆ ಆದಷ್ಟು ಬೇಗ ತಯಾರಾಗಿ ಮತ್ತೆ ಈ ಸಮಾಜ ಸೇವೆಗೆ ಸಿದ್ದ ಎಂದು ಅವರು ಹೇಳಿದರು. ಈ ಸಂಧರ್ಭದಲ್ಲಿ ಪ್ರಭು ಕೋಪರ್ಡೆ, ಚಿದಾನಂದ ಪಾಲಬಾಂವಿ, ಮೋಹನ ಹಾಶಿಲಾಕರ್, ನಾಗಪ್ಪ ಬಕರೇ ಹಾಗೂ ಇಂಚಗೇರಿ ಸಂಪ್ರದಾಯದ ನಾಮದಾರಿಕರಿದ್ದರು.