ಕೊರೋನಾ ನಿರ್ಮೂಲನೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ತುಂಬಾ ಮುಖ್ಯ ಇದೆ-ಮುಖ್ಯಾಧಿಕಾರಿ ಈರಣ್ಣ ದಡ್ಡಿ......
ವರದಿ : ಕೆ.ಎಸ್. ರಂಗಸ್ವಾಮಿ
ತೇರದಾಳ: ರಾಜ್ಯದೆಲ್ಲೆಡೆ ಕೊರೋನಾ ತಾಂಡವವಾಡುತ್ತಿದ್ದು, ಎಲ್ಲೇಂದರಲ್ಲಿ ತನ್ನ ಕದಂಬ ಬಾಹುವನ್ನು ಚಾಚುತ್ತಲೇ ಹೊರಟಿದೆ.ಇದಕ್ಕಾಗಿ ಸರಕಾರವು ಎಲ್ಲರಿಗೂ ಕಡ್ಡಾಯವಾಗಿ ಕೆಲವು ಸುರಕ್ಷತಾ ಕ್ರಮಗಳನ್ನು ಪಾಲಿಸಲು ಆದೇಶಮಾಡಿದೆ. ಕಡ್ಡಾಯವಾಗಿ ಮಾಸ್ಕ ಧರಿಸುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಅನವಶ್ಯಕವಾಗಿ ಹೊರಗಡೆ ಹೋಗುವುದು,ಯಾವುದೇ ಕಾರ್ಯಕ್ರಮ ಆಯೋಜನೆ ಮಾಡದಿರುವುದು ಹೀಗೆ ಹಲವಾರು ನಿಯಮಗಳನ್ನು ಪಾಲಿಸಿ ಕರೋನಾ ವೈರಸ ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸರಕಾರದೊಂದಿಗೆ ಕೈಜೋಡಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತಿ ದಿನವೂ ವಿವಿಧ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತಲೇ ಇದೆ. ಆದರೂ ಸಹ ಸಾರ್ವಜನಿಕರೂ ಯಾವುದೇ ರೀತಿಯ ಸಾಮಾಜಿಕ ಅಂತರವಿಲ್ಲದೆ ಸರಕಾರದ ನಿಯಮಗಳನ್ನು ಲೆಕ್ಕಿಸದೆ ಸಂತೆ, ಮದುವೆ ಮುಂಜಿ ಇನ್ನೀತರ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುವುದು ಇಲಾಖೆಯ ಗಮನಕ್ಕೆ ಬರುತ್ತಲೇ ಇದೆ. ಈ ರೀತಿ ಮಾಡುವುದು ಸರಿಯೇ?
ಅಲ್ಲದೆ ಯಾರೇ ಆಗಲಿ ಬೇರೆ ಪ್ರದೇಶದಿಂದ ಬಂದಲ್ಲಿ ಅಂತವರ ಬಗ್ಗೆ ಆ ಮನೆಯವರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕೆಂದು ತಿಳಿಸಲಾಗಿದೆ.ಹಿಗೀದ್ಯಾಗೂ ಸಾಕಷ್ಟು ಜನ ತಮ್ಮ ತಮ್ಮ ಮನೆಗೆ ಬಂದ ಬೀಗರು,ಬಿಜ್ಜರುಗಳ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಡುತ್ತಿದ್ದಾರೆ. ಹೀಗೆ ಮಾಡುವದರಿಂದ ನೀವು ಕೊರೋನಾ ವೈರಸ್‍ಗೆ ಆವ್ಹಾನ ನೀಡಿದಂತಾಗುವುದಿಲ್ಲವೆ? ನೀವು ಮಾಡುವ ಒಂದೇ ಒಂದು ತಪ್ಪು ಈಡಿ ಪಟ್ಟಣಕ್ಕೆ ಗಂಡಾಂತರವಾಗಬಹುದು. ಇದರ ದುಷ್ಪರಿಣಾಮವೇ ಇಂದು ನಾವು ಎದುರಿಸಬೇಕಾದ ಪರಿಸ್ಥಿತಿ ಬಂತು ಎನ್ನಬಹುದು. ನೀವು ಬೇರೆಕಡೆಯಿಂದ ಬಂದಿದ್ದಲ್ಲಿ ಯಾವುದಕ್ಕೂ ಹೆದರದೆ ನಿರಾತಂಕವಾಗಿ ತಿಳಿಸಿ ಸರಕಾರ ಕೂಡಲೇ ನಿಮ್ಮ ನೆರವಿಗೆ ಬರುವುದು ಅಲ್ಲದೇ ನಿಮ್ಮ ರಕ್ಷಣೆಯನ್ನು ಮಾಡುವುದು ಅದು ಬಿಟ್ಟು ವಿಷಯ ಗೌಪ್ಯವಾಗಿಟ್ಟಲ್ಲಿ ಅದಕ್ಕೇ ತುಂಬಲಾರದಂತಹ ಹಾಣಿಯನ್ನು ತಾವು ತೆತ್ತಬೇಕಾಗುತ್ತದೆ.ಕಾರಣ ಈಗಲಾದರೂ ತಾವೂ ಜಾಗೃತರಾಗಿರಿ, ಪಟ್ಟಣಕ್ಕೆ ಯಾರೇ ಆಗಲಿ ಎಲ್ಲಿಂದಲೇ ಬರಲಿ ತಾವು ಕಡ್ಡಾಯವಾಗಿ ಇಲಾಖೆಗೆ ಮಾಹಿತಿ ನೀಡಬೇಕು. ಪಟ್ಟಣದಲ್ಲಿ ನಿಮ್ಮ ಮನೆಯ ಹತ್ತಿರವಾಗಲೀ ಅಥವಾ ನಿಮ್ಮ ವಾರ್ಡಗಳಲ್ಲಾಗಲಿ, ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಾಗಲಿ ಯಾರಾದರೂ ಹೊಸಬರು ಕಂಡುಬಂದಲ್ಲಿ ಕೂಡಲೇ ಇಲಾಖೆಯ ಗಮನಕ್ಕೆ ತರಬೇಕು.ಇದರಲ್ಲಿ ನಿಮ್ಮ ಕುಟುಂಬದ,ನಿಮ್ಮ ಬಂಧು ಬಾಂಧವರ,ನಿಮ್ಮ ನೆರೆಹೊರೆಯವರ,ಅಲ್ಲದೆ ಇಡೀ ಪಟ್ಟಣದ ಸಂರಕ್ಷಣೆ ಅಡಗಿದೆ. ಆದ್ದರಿಂದ ಯಾರೇ ಇದ್ದರೂ ಅವರ ಬಗ್ಗೆ ಮಾಹಿತಿ ನೀಡಿ.ಇದು ನಿಮ್ಮ ಮೂಲಭೂತ ಕರ್ತವ್ಯ ಎಂದು ತಿಳಿದುಕೊಳ್ಳಿ. ಸರಕಾರವಂತೂ ನಿಮ್ಮ ರಕ್ಷಣೆಗಾಗಿ ನಿರಂತರವಾಗಿ ಹಗಲಿರುಳು ಶ್ರಮಿಸುತ್ತಲಿದೆ. ನಿಮ್ಮೆಲ್ಲರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ಆರೋಗ್ಯ ಇಲಾಖೆಯ,ಪೋಲಿಸ್ ಇಲಾಖೆಯ,ಕಂದಾಯ ಇಲಾಖೆಯ,ಪುರಸಭೆ ಇಲಾಖೆಯ ಎಷ್ಟೋ ವಾರಿಯರ್ಸಗಳ ಇವತ್ತು ಕರೋನಾ ಸೋಂಕಿಗೊಳಗಾಗಿ ಆಸ್ಪತ್ರೆಸೇರಿದ್ದಾರೆ. ಪರಿಸ್ಥಿತಿ ಭಯಾನಕವಾಗಿರುವಾಗ ಸಾರ್ವಜನಿಕರು ಇನ್ನೂ ತಮ್ಮ ಜವಾಬ್ದಾರಿ ಅರಿತುಕೊಳ್ಳದಿರುವುದು ತುಂಬಾ ನೋವೆನಿಸುತ್ತದೆ. ನಾವು ಪದೇ ಪದೇ ಹೇಳುತ್ತಲೇ ಇದ್ದೇವೆ, ಕೊರೋನಾ ವೈರಸಗೆ ಲಸಿಕೆ ಕಂಡುಹಿಡಿದಿಲ್ಲ ಅದರೇ ಅದರ ಲಸಿಕೆ ನಿಮ್ಮ ಕೈಯಲ್ಲಿಯೇ ಇದೆ, ಅದುವೇ ಸಾಮಾಜಿಕ ಅಂತರ ಹಾಗೂ ಮಾಸ್ಕ ಧರಿಸುವುದು. ಕಾರಣ ನಮ್ಮ ರಕ್ಷಣೆಯ ಸೂತ್ರ ನಮ್ಮ ಕೈಯಲ್ಲಿಯೇ ಇದೆ.ಆದ್ದರಿಂದ ಇನ್ನಾದರೂ ತಾವೆಲ್ಲರೂ ಸರಕಾರದ ನಿಯಮವನ್ನು ಪಾಲಿಸಿ ಪುಣ್ಯಕಟ್ಟಿಕೊಳ್ಳಿ ಎಂದು ತೇರದಾಳದ
ಮುಖ್ಯಾಧಿಕಾರಿ ಈರಣ್ಣ ದಡ್ಡಿಯವರು ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಈ ಮೂಲಕ ತಿಳಿಸಿದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698


Social Plugin