ತೇರದಾಳ ಪಟ್ಟಣದ ಅಂಬೇಡ್ಕರ ಸರ್ಕಲ್‍ದಲ್ಲಿ ಸೋಂಕಿತ ಪ್ರದೇಶದಲ್ಲಿ ಪುರಸಭೆವತಿಯಿಂದ ಸ್ಯಾನಿಟೈಜರ್ ಸಿಂಪರಣೆ ಮಾಡುತ್ತಿರುವುದು.



ತೇರದಾಳ ಪಟ್ಟಣದ ಅಂಬೇಡ್ಕರ ಸರ್ಕಲ್‍ದಲ್ಲಿ ಸೋಂಕಿತ ಪ್ರದೇಶವನ್ನು ಅಧಿಕಾರಿಗಳು ವೀಕ್ಷಣೆ ಮಾಡುತ್ತಿರುವುದು.


ತೇರದಾಳ ಪಟ್ಟಣಕ್ಕೆ ಒಕ್ಕರಿಸಿದ ಕೊರೊನಾ

3 ದಿನಗಳ ಹಿಂದೆ ಮಹಾರಾಷ್ಟ್ರದ ಸಾಂಗಲಿಯಿಂದ ಬಂದ ವ್ಯಕ್ತಿಯಿಂದ ವೈರಸ್

ತೇರದಾಳ : ಪಟ್ಟಣಕ್ಕೆ ಮಹಾಮಾರಿ ಕೊರೊನಾ ವೈರಸ್ ಒಕ್ಕರಿಸಿ ಜನತೆಯಲ್ಲಿ ಆತಂಕ ಮೂಡಿಸಿದೆ. ಸೋಂಕಿತ ವ್ಯಕ್ತಿಯಿದ್ದ ಪ್ರದೇಶವನ್ನು ಇಂದು ಬೆಳಿಗ್ಗೆ ಪುರಸಭೆಯವರು ಸ್ಯಾನಿಟೈಜರ್ ಮಾಡಿ ಜನರಲ್ಲಿ ಜಾಗೃತಿಯನ್ನು ಆರೋಗ್ಯಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಮತ್ತು ಪೋಲಿಸ್ ಇಲಾಖೆಯವರು ಮೂಡಿಸಿದ್ದಾರೆ.


#Subscribe #ಸ್ವರೂಪ_ಸಂದರ್ಶನ

  ಪಟ್ಟಣಕ್ಕೆ ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರದ ಸಾಂಗಲಿಯಿಂದ ವ್ಯಕ್ತಿ ತನ್ನ ಕುಟುಂಬ ಸಮೇತನಾಗಿ ಪತ್ನಿಯ ತವರು ಮನೆಗೆ ಬಂದಿದ್ದ. ಆ ವ್ಯಕ್ತಿ ಬಂದಿರುವ ವಿಷಯವನ್ನು ತಿಳಿದ ಆಶಾ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಅವರು ಎಲ್ಲಿಂದ ಬಂದಿದ್ದಾರೆ ಎಂದು ತಿಳಿದುಕೊಳ್ಳಲು ಹೋದಾಗ ರಾಯಬಾಗದಿಂದ ಬಂದಿರುವುದಾಗಿ ತಿಳಿಸಿದ್ದರು. ಆದರೂ ಸಂಶಯಗೊಂಡ ಆರೋಗ್ಯ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಒತ್ತಾಯ ಮಾಡಿದಾಗ ಅವರು ಮಹಾರಾಷ್ಟ್ರದ ಸಾಂಗಲಿಯಿಂದ ಬಂದಿರುವುದಾಗಿ ತಿಳಿಸಿದರು. ಕೂಡಲೆ ಅವರನ್ನು ಸ್ಥಳೀಯ ಮುರಾರ್ಜಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕೊರೊಂಟೈನ್ ಮಾಡಿ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಬುಧುವಾರ ತಡ ರಾತ್ರಿ ಒಬ್ಬ ವ್ಯೆಕ್ತಿಯದು ಪಾಸೀಟಿವ್ ಎಂದು ಮತ್ತು ಪತ್ನಿ ಹಾಗೂ ಎರಡು ವರ್ಷದ ಮಗುವಿನ ನೆಗಟೀವ್ ಬಂದಿದೆ. ಪಾಸೀಟಿವ್ ಬಂದಿರುವ ವ್ಯಕ್ತಿಯನ್ನು ರಾತ್ರಿ 11ಗಂಟೆ ಸುಮಾರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆ ಬಾಗಲಕೋಟೆಯಲ್ಲಿ ದಾಖಲಿಸಲಾಗಿದೆ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ಹಾಗೂ ಗ್ರಾಮಲೆಕ್ಕಾಧಿಕಾರಿ ತಿಳಿಸಿದ್ದಾರೆ. ಇನ್ನುಳಿದವರನ್ನು ಸ್ಥಳೀಯ ಮುರಾರ್ಜಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಮುರಾರ್ಜಿ ವಸತಿ ಶಾಲೆಯಲ್ಲಿ 9ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

   ಸೋಂಕಿತ ಪ್ರದೇಶಕ್ಕೆ ಪುರಸಭೆ ವತಿಯಿಂದ ಸ್ಯಾನಿಟೈಜರ್ ಮಾಡಲಾಯಿತು. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳು ಇಂದು ಭೇಟಿ ನೀಡಿ ಅಲ್ಲಿನ ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಯಾರೂ ಅನಾವಶ್ಯಕವಾಗಿ ಹೊರಗಡೆ ತಿರುಗಾಡಬೇಡಿರಿ ಎಂದು ತಿಳುವಳಿಕೆ ಹೇಳಿದರು.

  ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ,  ಸ್ಥಳೀಯ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪಿಎಸ್‍ಐ ವಿಜಯ ಕಾಂಬಳೆ, ಗ್ರಾಮ ಲೆಕ್ಕಾಧಿಕಾರಿ ಎಸ್.ಬಿ.ಮಠಪತಿ ಸೇರಿದಂತೆ ಇತರರು ಇದ್ದರು.


- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698