ತೇರದಾಳ ಪಟ್ಟಣದ ಹಳೆಪೇಠ ಗಲ್ಲಿಯಲ್ಲಿನ ಸೋಂಕಿತನನ್ನು ಅಂಬ್ಯುಲೆನ್ಸ್ ವಾಹನದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸಾಗಿಸುತ್ತಿರುವುದು.
ತೇರದಾಳ ಪಟ್ಟಣದ ಹಳೆಪೇಠ ಗಲ್ಲಿಯಲ್ಲಿನ ಸೋಂಕಿತನು ವಾಸಿಸುತ್ತಿರುವ ಗಲ್ಲಿಯಲ್ಲಿ ಪುರಸಭೆ ವತಿಯಿಂದ ಸ್ಯಾನಿಟೈಜರ್ ಮಾಡುತ್ತಿರುವುದು
ಕೊರೊನಾ ಸೋಂಕಿತ ಮೂರನೇ ವ್ಯಕ್ತಿ ಪತ್ತೆ
ತೇರದಾಳ : ಪಟ್ಟಣದ ಹಳೆಪೇಠ ಗಲ್ಲಿಯಲ್ಲಿನ 60ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಪತ್ಯೆಯಾಗಿದ್ದು ಸೋಂಕಿತನನ್ನು ಇಂದು ಶುಕ್ರವಾರ ಸಾಯಂಕಾಲ ಬಾಗಲಕೋಟ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕಳುಹಿಸಲಾಯಿತು.
ಮಹಾಮಾರಿ ಕೊರೊನಾ ವೈರಸ್ ನಾಗಾಲೋಟ ಹೆಚ್ಚಾಗಿದ್ದು. ಪಟ್ಟಣದಲ್ಲಿ ಮೂರನೆಯ ಸೋಂಕಿತ ವ್ಯಕ್ತಿ ಪತ್ಯೆಯಾಗಿದೆ. ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಜನತೆಯಲ್ಲಿ ಆತಂಕ ಮನೆ ಮಾಡಿದೆ. 60ವರ್ಷದ ಪುರುಷನಿಗೆ ಸೋಂಕು ತಗುಲಿರುವದರಿಂದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ಜೊತೆ ವಾಸಿಸುತ್ತಿದ್ದ ಕುಟುಂಬದ ಮೂವರನ್ನು ರಬಕವಿಯ ಓಬಿಸಿ ಹಾಸ್ಟೇಲ್‍ದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 10ಜನರನ್ನು ಹೋಮ ಕ್ವಾರಂಟೈನ್ ಮಾಡಲಾಗಿದೆ ಮತ್ತು ಅವರ ಮನೆಯ ಸುತ್ತಲೂ ಬಿದರನ್ನು ಕಟ್ಟಿ ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತನ ಮನೆಯ ಸುತ್ತಲು ಹಾಗೂ ಆ ಗಲ್ಲಿಯಲ್ಲಿ ಪುರಸಭೆ ವತಿಯಿಂದ ಸ್ಯಾನಿಟೈಜರ್ ಮಾಡಲಾಯಿತು.
ಸಾರ್ವಜನಿಕರು ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ. ಕಡ್ಡಾಯವಾಗಿ ಎಲ್ಲರೂ ಮಾಸ್ಕ್‍ನ್ನು ಧರಿಸಬೇಕು. ನಾವೂ ಕೊರೊನಾ ಜೊತೆ ಬದುಕಬೇಕಾಗಿದೆ. ಯಾರೂ ಹೆದರಬೆಕಾಗಿಲ್ಲ. ಮುಂಜಾಗ್ರತೆ ಕ್ರಮವಾಗಿ ಸರಕಾರದ ನಿಯಮಗಳನ್ನು ಪಾಲಿಸಬೇಕು. ಕೊರೊನಾ ಪಾಜಿಟೀವ್ ಬಂದ ವ್ಯಕ್ತಿಯನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ, ವ್ಯಕ್ತಿಯನ್ನು ಹಾಗೂ ಅವರ ಕುಟುಂಬವನ್ನು ಕೀಳು ಭಾವನೆಯಿಂದ ಕಾಣಬೇಡಿರಿ ಎಂದು ಪಿಎಸ್‍ಐ ವಿಜಯ ಕಾಂಬಳೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಪೋಲಿಸ್ ಠಾಣೆಯ ಪಿಎಸ್‍ಐ ವಿಜಯ ಕಾಂಬಳೆ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಗ್ರಾಮಲೆಕ್ಕಾಧಿಕಾರಿ ಎಸ್.ಬಿ.ಮಠಪತಿ, ಮಹಾದೇವ ಯಲ್ಲಟ್ಟಿ ಹಾಗೂ ಆರೋಗ್ಯ ಸಹಾಯಕರು ಸೇರಿದಂತೆ ಪುರಸಭೆ ಕಾರ್ಮಿಕರು ಇದ್ದರು.
Social Plugin