ಬನಹಟ್ಟಿಯ ಪ್ರತಿಭಾವಂತ ವಿದ್ಯಾರ್ಥಿ ಪ್ರದೀಪ ರಾಜು ಜಾಲಿಕಟ್ಟಿ ನಿತ್ಯ ತಾಯಿಯೊಂದಿಗೆ ಸೀರೆ ಗಳಿಗೆ ಕಾಯಕದಲ್ಲಿ ತೊಡಗುತ್ತಾನೆ.
ಸೀರೆ `ಗಳಿಗೆ’ಯೊಂದಿಗೆ ಅಂಕ `ಗಳಿಕೆ’ ಮಾಡಿದ ಪ್ರದೀಪ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜು17: ಸೀರೆಗಳನ್ನು `ಗಳಿಗೆ’(ಮಡಚುವ ಕಾರ್ಯ) ಮಾಡುವದರೊಂದಿಗೆ ಸರಸ್ವತಿಯನ್ನು ಓಲೈಸಿಕೊಂಡ ವಿದ್ಯಾರ್ಥಿ ಅಂಕಗಳನ್ನೂ `ಗಳಿಕೆ’ ಮಾಡುವ ಮೂಲಕ ಪ್ರತಿಭೆಗೆ ಬಡತನ ಅಡ್ಡಿಯಾಗದು ಎನ್ನುವದನ್ನು ಸಾಬೀತುಪಡಿಸಿದ್ದಾನೆ.
ಇದು ರಬಕವಿ-ಬನಹಟ್ಟಿ ತಾಲೂಕಿನ ಎಸ್‍ಆರ್‍ಎ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ ಶೇ.94 ರಷ್ಟು ಅಂಕ ಪಡೆದ ವಿದ್ಯಾರ್ಥಿ ಪ್ರದೀಪ ರಾಜು ಜಾಲಿಕಟ್ಟಿಯದ್ದು ಕೆಎಎಸ್ ಪರೀಕ್ಷೆ ಬರೆಯುವ ಕನಸು.
ಛಲವಿದ್ದರೆ ಸಾಧನೆ ಸುಲಭ: ಛಲವಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದೆಂದು ಪ್ರದೀಪ ತೋರಿಸಿಕೊಟ್ಟಿದ್ದಾನೆ. ಬಡತನದ ಬೇಗೆಯಲ್ಲಿ ಬೆಂದು ಪೈಸೆಯ ಬೆಲೆ ಅರಿತಿರುವ ವಿದ್ಯಾರ್ಥಿ ವಾಣಿಜ್ಯ ವಿಭಾಗದಲ್ಲಿ ಅದ್ಭುತ ಸಾಧನೆ ಮಾಡಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.
ಕೆಎಎಸ್ ಕನಸು ಹೊತ್ತಿರುವ ಈತ ಈಗಿನಿಂದಲೇ ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ. ಹಾಗಾಗಿ ಅದು ಈಡೇರುತ್ತದೆ ಎಂಬ ನಂಬಿಕೆಯಿದೆ ಎಂದು ವಿದ್ಯಾರ್ಥಿ ಪ್ರದೀಪ ತಿಳಿಸಿದ್ದಾನೆ.
ಕನ್ನಡ-98, ಇತಿಹಾಸ-97, ಸಾಮಾನ್ಯ ವಿಜ್ಞಾನ-97, ಸಮಾಜ ಶಾಸ್ತ್ರ-97, ಅರ್ಥಶಾಸ್ತ್ರ-90, ಇಂಗ್ಲೀಷ್-82 ಒಟ್ಟು 561 ಅಂಕ ಗಳಿಸಿದ್ದಾನೆ.
ದಿನಂಪ್ರತಿ ತಂದೆ-ತಾಯಿಯ ಕಾಯಕವಾಗಿರುವ ಸೀರೆ ನೇಯ್ಗೆಯ ವೃತ್ತಿಗೆ ಸಹಾಯವಾಗುತ್ತೇನೆ. ಸೀರೆಗಳನ್ನು ಗಳಿಗೆ ಹಾಕಿ ನಂತರದ ಸಮಯದಲ್ಲಿ ವಿದ್ಯಾಭ್ಯಾಸಕ್ಕೆ 4-5 ಗಂಟೆ ಮೀಸಲಿಡುತ್ತೇನೆ.
ಕಾಲೇಜು ಉಪನ್ಯಾಸಕರಾದ ಸಂಜಯ ನಡುವಿನಕೇರಿ, ಸಿದ್ರಾಮ ಖಾನಾಪುರ, ಎಸ್.ಬಿ. ತಳವಾರ, ಮಾಧವಾನಂದ ಗುಟ್ಲಿ, ಶಿಲ್ಪಾ ಅಗಡಿಯವರ ನಿತ್ಯ ಸಹಕಾರ ಸಹಾಯದಿಂದ ಇಷ್ಟೊಂದು ಅಂಕಗಳನ್ನು ಪಡೆಯಲು ಕಾರಣವೆನ್ನುತ್ತಾನೆ ವಿದ್ಯಾರ್ಥಿ ಪ್ರದೀಪ.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin