ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಈಶ್ವರ ನಾಗರಾಳ ಅಧಿಕಾರ ಸ್ವೀಕರಿಸಿದರು.
ಅಧಿಕಾರ ದೊರೆತಾಗ ಪ್ರಾಮಾಣಿಕತೆ ಕೆಲಸವಿರಲಿ
ರಬಕವಿ-ಬನಹಟ್ಟಿ,ಜು7: ಜನಸಮುದಾಯಕ್ಕೆ ಹಿತ ಬಯಸುವ ಯಾವದೇ ಅಧಿಕಾರವಿರಲಿ ಪ್ರಾಮಾಣಿಕತೆ ಹಾಗು ದಕ್ಷತೆಯಿಂದ ಕಾರ್ಯನಿರ್ವಹಿಸಿ, ನಿಷ್ಪಕ್ಷಪಾತ ಹಾಗು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸಮಾಜದ ಹಿತಕ್ಕಾಗಿ ಶ್ರಮಿಸಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.
ಇಂದು ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಈಶ್ವರ ನಾಗರಾಳ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ ಅಭಿವೃದ್ಧಿಯೊಂದಿಗೆ ಹೊಸ ಹೊಸ ಯೋಜನೆಗಳನ್ನು ತರುವ ಮೂಲಕ ಉದ್ಯಾನವನ ಸೇರಿದಂತೆ ಇತರೆ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ನೂತನ ಅಧ್ಯಕ್ಷರಿಗೆ ಮನವರಿಕೆ ಮಾಡಿದರು.
ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀ ಸಾನಿಧ್ಯ ವಹಿಸಿದ್ದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಮಹಾದೇವ ಧೂಪದಾಳ, ಪರಪ್ಪ ಪೂಜೇರಿ, ಮಲ್ಲು ಬಾಣಕಾರ, ಶ್ರೀಶೈಲ ದಲಾಲ, ದುಂಡಪ್ಪ ಮಾಚಕನೂರ, ಮಲ್ಲಿಕಾರ್ಜುನ ನಾಶಿ, ವಿಜಯ ನಾಶಿ, ಸಂಜಯ ತೆಗ್ಗಿ, ಮಲ್ಲಿಕಾರ್ಜುನ ಉಮದಿ ಸೇರಿದಂತೆ ಅನೇಕರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin