ವ್ಯಕ್ತಿ ಕಾಣೆ
ರಬಕವಿ-ಬನಹಟ್ಟಿ,7: ತಾಲೂಕಿನ ಯರಗಟ್ಟಿ ಗ್ರಾಮದ ಕೂಲಿ ಕೆಲಸ ಮಾಡುವ ಮಲ್ಲೇಶ ಧರೆಪ್ಪ ಪಾಟೀಲ(20) ಕಳೆದ ಜೂನ್ 20 ರಂದು ಬೆಳಿಗ್ಗೆ 10:30 ರ ಸುಮಾರಿಗೆ ತನ್ನ ಮನೆಯಲ್ಲಿದ್ದ ಮೋಟಾರ್ ಸೈಕಲ್‍ದೊಂದಿಗೆ 70 ಸಾವಿರ ರೂಪಾಯಿಯೊಂದಿಗೆ ಅಮವಾಸ್ಯೆಯಂದು ಗುಡ್ಡಾಪುರದ ದಾನಮ್ಮದೇವಿ ಹಾಗು ಮುಚ್ಚಂಡಿಯ ಧರಿದೇವರ ಗುಡಿಗೆ ಹೋಗಿ ಬರುವದಾಗಿ ಹೇಳಿ ಹೋದವನು ಇಲ್ಲಿಯವರೆಗೂ ಮನೆಗೆ ಬಾರದ ಕಾರಣ ಆತನ ತಂದೆ ಧರೆಪ್ಪ ಪಾಟೀಲ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಫಿರ್ಯಾಧಿ ನೀಡಿದ್ದಾರೆ.
ಕಾಣೆಯಾದ ವ್ಯಕ್ತಿ ಮಲ್ಲೇಶನು 5 ಅಡಿ 8 ಇಂಚು ಎತ್ತರ, ಮೈಯಿಂದ ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಉದ್ದ ಮುಖ, ತಲೆಯಲ್ಲಿ ಕಪ್ಪು ಕೂದಲು ಸಣ್ಣ ಗಡ್ಡ ಮೀಸೆ, ಮನೆ ಬಿಡುವ ಸಂದರ್ಭ ಹಳದಿ ಬಣ್ಣದ ಶರ್ಟ್, ತಿಳಿ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುವವನಾಗಿದ್ದಾನೆ.
ಈ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಬನಹಟ್ಟಿ ಪೊಲೀಸ್ ಠಾಣೆ 08353-230233/08353-230292 ಸಂಪರ್ಕಿಸಲು ಕೋರಲಾಗಿದೆ.
ಟ್ರ್ಯಾಕ್ಟರ್‍ಗೆ ಸಿಲುಕಿ ವ್ಯಕ್ತಿ ಸಾವು: ಚಲಿಸುತ್ತಿದ್ದ ಟ್ರ್ಯಾಕ್ಟರ್‍ನ ಮೇಲೆ ಕುಳಿತಿದ್ದ ವ್ಯಕ್ತಿಯು ಬಿದ್ದ ಪರಿಣಾಮ ಹಿಂದಿನ ಗಾಲಿಗೆ ಸಿಲುಕಿ ಹೊಟ್ಟೆಗೆ ಹಾಯ್ದು ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಸಾವನ್ನಪ್ಪಿದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡುತ್ತಿದ್ದ ಗುರುರಾಜ ಆಲಗೊಂಡ ಕಿತ್ತೂರ(22) ಎಂಬಾತನೇ ಸಾವಿಗೀಡಾದ ದುರ್ದೈವಿ. ರಾಯಪ್ಪ ಲಕ್ಷ್ಮಣ ಮಾಳಗೌಡ ಎಂಬಾತನು ಟ್ರ್ಯಾಕ್ಟರ್ ಚಾಲನೆ ಮಾಡುವ ಸಂದರ್ಭ ತನ್ನ ಎಡಬಾಜು ಕುಡ್ರಿಸಿಕೊಂಡು ಟ್ರ್ಯಾಕ್ಟರ್ ಟ್ರೇಟಲ್‍ರನ್ನು ಅತೀ ಜೋರಾಗಿ ನಿರ್ಲಕ್ಷ್ಯತನದಿಂದ ಜಗದಾಳ ಹದ್ದಿಯ ಗರಸು ಕಣಿವೆಯಿಂದ ನಾವಲಗಿ ಕ್ರಾಸ್ ಕಡೆಗೆ ನಡೆಸುತ್ತಾ ಬಂದು ಜಗದಾಳದ ಮುತ್ತಪ್ಪ ಭೀಮಪ್ಪ ತಳವಾರ ಇವರ ಹೊಲದ ಹತ್ತಿರ ಕೆಳಗೆ ಬಿದ್ದ ಪರಿಣಾಮ ತಲೆಗೆ ಭಾರಿ ಪೆಟ್ಟಾಗಿ, ಟ್ರ್ಯಾಕ್ಟರ್‍ನ ಹಿಂದಿನ ಎಡಗಾಲಿ ಎದೆಗೆ, ಹೊಟ್ಟೆಗೆ ತಾಗುವಂತೆ ಮಾಡಿ ಭಾರಿ ಗಾಯಪೆಟ್ಟಾಗಿತ್ತು. ತಕ್ಷಣವೇ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿ ಸಾವನಪ್ಪಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Social Plugin