ನಾಗರಾಳಗೆ ಸನ್ಮಾನ
ರಬಕವಿ-ಬನಹಟ್ಟಿ,ಜು5: ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರಬಕವಿಯ ಈಶ್ವರ ನಾಗರಾಳ ನೇಮಕಗೊಂಡಿದ್ದಕ್ಕೆ ತಾಲೂಕಾ ಹಿಂದು ಸಂಘಟನೆ ಸನ್ಮಾನಿಸಿತು.
ರಬಕವಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹಿಂದು ಸಂಘಟನಾ ಮುಖಂಡ ನಂದು ಗಾಯಕವಾಡ ಮಾತನಾಡಿ, ವಿಶ್ವ ಹಿಂದು ಪರಿಷತ್‍ನ ಮಾಜಿ ಸಂಚಾಲಕರಾದ ಈಶ್ವರ ನಾಗರಾಳ ನೇಮಕಗೊಂಡಿದ್ದು ನಗರ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭ ಪ್ರಭು ಪೂಜೇರಿ, ಗಂಗಪ್ಪ ಹುಕ್ಕೇರಿ, ಸಿದ್ದು ಇರಳಿ, ಬಸವರಾಜ ಅಮ್ಮಣಗಿಮಠ, ಪರಶುರಾಮ ಕಾಖಂಡಕಿ, ಯಮನಪ್ಪ ಕೋರಿ, ವಿನಾಯಕ ರಜಪೂತ, ಪ್ರದೀಪ ದೇಶಪಾಂಡೆ, ರವಿ ಕೊರತೆ, ವಿಶ್ವನಾಥ ಹೂಗಾರ, ತಳವಾರ, ಶ್ರೀಕಾಂತ ಕೆಂಧೂಳಿ, ಮಂಜುನಾಥ ಮಠದ ಸೇರಿದಂತೆ ಇತರರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin