ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಕೃಷಿ ಇಲಾಖೆ ಗಂಗಾ ಕಲ್ಯಾಣ ಯೋಜನೆ ಜಿಲ್ಲಾ ಹೆಚ್ಚುವರಿ ಎಂ.ಡಿ ರಾಜು ಅಶೋಕ ದೊಡಮನಿ ಇವರನ್ನು ಮಹಾವೀರ ಪ್ರಭು ಶ್ರೀಗಳು ಸತ್ಕರಿಸಿದರು.

ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಬಾಗಲಕೋಟ ಜಿಲ್ಲೆಯ ಕೃಷಿ ಇಲಾಖೆ ಗಂಗಾ ಕಲ್ಯಾಣ ಯೋಜನೆ ಜಿಲ್ಲಾ ಹೆಚ್ಚುವರಿ ಎಂ.ಡಿ ರಾಜು ಅಶೋಕ ದೊಡಮನಿ ಇವರನ್ನು ಮಹಾವೀರ ಪ್ರಭು ಶ್ರೀಗಳು ಸತ್ಕರಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ರಾಜು ದೊಡಮನಿ ಅವರು ಸರಕಾರದ ಬಹುತೇಕ ಯೋಜನೆಗಳನ್ನು ನಾವು ರೈತರ ಮನೆ ಬಾಗಿಲಗೆ ಒದಗಿಸುತ್ತಿದ್ದೇವೆ. ಕೃಷಿ ಇಲಾಖೆಯ ಯೋಜನೆಗಳನ್ನು ಸಾಮಾನ್ಯ ಬಡ ರೈತರ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಇವುಗಳನ್ನು ರೈತರು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಧೃಢವಾಗಬೇಕು. ಈಗಾಗಲೇ ಸಾವಿರಕ್ಕೂ ಅಧಿಕ ಬಡ ರೈತರ ಜಮೀನುಗಳಿಗೆ ಉಚಿತವಾಗಿ ಕೃಷಿ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯ ಮೂಲಕ ಕೊಳವೆ ಬಾವಿಯನ್ನು ರೈತರ ಜಮೀನುಗಳಿಗೆ ಒದಗಿಸಲಾಗಿದೆ ಎಂದರು.

  ಮಹಾವೀರ ಶ್ರೀಗಳು ಮಾತನಾಡಿ ಇವರೊಬ್ಬ ಅಧಿಕಾರಿ ಎಂದು ನಡೆಯದೇ ರೈತರ ಸ್ನೇಹಿತರಾಗಿ ಸರ್ಕಾರಿ ಕೆಲಸ ದೇವರ ಕೆಲಸವೆಂಬ ತತ್ವವನ್ನು ಮೈಗೂಡಿಕೊಂಡು, ಸರಳತೆಯ ಮಾತುಗಳು ಮುಗ್ಧತೆಯ ಮನಸ್ಸಿನೊಂದಿಗೆ ಬಲು ಬೇಗ ರೈತರಿಗೆ ಆತ್ಮೀಯರಾಗುತ್ತಾ ಸಮಾಜ ಸೇವೆಯೊಂದಿಗೆ ಸಾಮಾಜಿಕವಾಗಿ ಗುತಿಸಿಕೊಂಡಿರುವ ರಾಜು ದೊಡಮನಿ ಇವರಿಂದ ಇನ್ನಷ್ಟು ಬಡ ರೈತರಿಗೆ ಅನುಕೂಲವಾಗಲಿ ಎಂದರು.

  ಈ ಸಂದರ್ಭದಲ್ಲಿ ಅಶೋಕ ದೊಡಮನಿ, ಮಹಾದೇವ ಹೊಸೂರ, ಮಹಾದೇವ ಕಂಬೋಗಿ, ಧರೆಪ್ಪ ಆನೆಗುಂದಿ, ಈರಯ್ಯ ಮಠಪತಿ, ರಂಗಪ್ಪ ಗೂಳನ್ನವರ ಸೇರಿದಂತೆ ಹಲವಾರು ಸದ್ಭಕ್ತರು ಇದ್ದರು.


- ನಿಮ್ಮ ಜಾಹೀರಾತುಗಳಿಗಾಗಿ 
    ಸಂಪರ್ಕಿಸಿ +91 9902523698