ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ ವೀಕ್ಷಣೆ ಮಾಡಿದರು.
ಕೋವಿಡ್-19 ನಿರ್ಮೂಲನೆ: ಸಾರ್ವಜನಿಕರಲ್ಲಿ ಸ್ವಯಃ ಜಾಗೃತಿ ಅಗತ್ಯ
ರಬಕವಿ-ಬನಹಟ್ಟಿ,ಜು5: ಕೋವಿಡ್-19 ನಿರ್ಮೂಲನೆಯ ಸಂದರ್ಭದಲ್ಲಿ ಸಾರ್ವಜನಿಕರ ಸ್ವಯಃ ಜಾಗೃತಿ ಅಗತ್ಯವಾಗಿದೆ ಎಂದು ಸ್ಥಳೀಯ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಅವರು ಭಾನುವಾರ ರಬಕವಿ ಬನಹಟ್ಟಿ ನಗರದ ಪ್ರಮುಖ ರಸ್ತೆಗಳ ವೀಕ್ಷಣೆ ನಡೆಸಿ ಪತ್ರಿಕೆಯ ಜೊತೆಗೆ ಮಾತನಾಡಿದರು.
33 ಗಂಟೆಗಳ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿದೆ. ಬಹಳಷ್ಟು ಜನರು ಮನೆ ಬಿಟ್ಟು ಹೊರಗೆ ಬಂದಿಲ್ಲ. ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದಾಗಿವೆ. ಇಂಥ ಸಂದರ್ಭದಲ್ಲಿ ಜನರ ಸಹಕಾರ ಅಗತ್ಯವಾಗಿದೆ ಎಂದು ಶ್ರೀನಿವಾಸ ಜಾಧವ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಆರೋಗ್ಯಾಧಿಕಾರಿ ರಾಜಕುಮಾರ ಹೊಸೂರ ಇದ್ದರು.
ಎಲ್ಲವೂ ಬಂದ್: ಭಾನುವಾರದ ಲಾಕ್ಡೌನ್ ನಿಮಿತ್ತವಾಗಿ ರಬಕವಿ ಬನಹಟ್ಟಿಯಲ್ಲಿ ಎಲ್ಲವೂ ಸಂಪೂರ್ಣವಾಗಿ ಬಂದಾಗಿದ್ದವು. ಬಸ್ ಮತ್ತು ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ತರಕಾರಿ ಮಾರುಕಟ್ಟೆ, ಔಷಧಿ ಅಂಗಡಿಗಳು ಕೂಡಾ ಕೆಲಸ ನಿರ್ವಹಿಸಲಿಲ್ಲ. ಜನರು ಇಲ್ಲದೆ ರಸ್ತೆಗಳು ಬೀಕೋ ಎನ್ನುತ್ತಿದ್ದವು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin