ಶಂಕೆಯಿಂದ ಬರುವವರಿಗೇ ಸೋಂಕು
ಶಂಕಿತರ ಹುಡುಕಾಟದಿಂದ ಸುಸ್ತಾದ ಅಧಿಕಾರಿಗಳು
ರಬಕವಿ-ಬನಹಟ್ಟಿ,ಜು25: ಅವಳಿ ನಗರದಲ್ಲಿ ಕೊರೊನಾ ವೈರಸ್‍ನ ಮಾರ್ಗವೇ ತಿಳಿಯುತ್ತಿಲ್ಲ. ಕೆಮ್ಮು, ನೆಗಡಿ ಹಾಗು ಜ್ವರದ ಶಂಕೆಯಿಂದ ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ರ್ಯಾಪಿಡ್ ಕಿಟ್ ಮೂಲಕ ಪರೀಕ್ಷೆ ನಡೆಸಿಕೊಳ್ಳುವ ಸಂದರ್ಭ ಕೊರೊನಾ ಸೋಂಕು ದೃಢವಾಗುತ್ತಿರುವ ಹಿನ್ನಲೆ ಜನತೆ ಮತ್ತಷ್ಟು ಭಯಭೀತರಾಗುವಲ್ಲಿ ಕಾರಣವಾಗಿದೆ.
ಇಂದು ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿ ಮತ್ತೇ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 38 ವರ್ಷದ ಯುವಕನೋರ್ವ ಸ್ಥಳೀಯ ನಗರಸಭೆಯಲ್ಲಿ ಸಾರ್ವಜನಿಕರಿಗೆ ತೆರಿಗೆ ಅರ್ಜಿ ತುಂಬುವ ಕಾರ್ಯದಲ್ಲಿ ತೊಡಗಿದವನಾಗಿದ್ದು, ಕಳೆದ ಆರೇಳು ದಿನಗಳಿಂದ ಕೆಮ್ಮು, ನೆಗಡಿಯಿಂದ ಮನೆಯಲ್ಲಿಯೇ ಉಳಿದಿದ್ದ, ಇಂದು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಸಂದರ್ಭ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟಿದೆ.
ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ 78 ಜನರಿಗೆ ಕೊರೊನಾ ವೈರಸ್ ಒಕ್ಕರಿಸಿದ್ದು, ರಬಕವಿ ಹಾಗು ಬನಹಟ್ಟಿ ಪಟ್ಟಣದಾದ್ಯಂತ ಮಧ್ಯ ಭಾಗದಲ್ಲಿಯೇ ಕಂಟೈನ್ಮೇಂಟ್ ವಲಯಗಳನ್ನು ಮಾಡಲಾಗಿದೆ. ಜನತೆ ಮಾತ್ರ ಯಾವದೇ ಭಯವಿಲ್ಲದೆ ನಿರ್ಲಕ್ಷ್ಯತನದಿಂದ ಸಂಚಾರ ನಡೆಸುತ್ತಿರುವದು ಮಾತ್ರ ತಪ್ಪಿಲ್ಲ.