ತೇರದಾಳ : ಮಹಾಮಾರಿ ಕೊರೊನಾದ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು ಇಂದು ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಅಂಟಿಕೊಂಡಿದ್ದು ಪಟ್ಟಣದ ಜನರನ್ನು ಭಯಭೀತರನ್ನಾಗಿಸಿದೆ.
ಪಟ್ಟಣದ ಕಿಲ್ಲಾ ಭಾಗದ ಒಂದೇ ಕುಟುಂಬದ 55ವರ್ಷದ ಮಹಿಳೆಗೆ, 30ವರ್ಷದ ಮಹಿಳೆಗೆ, 34ವರ್ಷದ ಪುರುಷ ಹಾಗೂ 79ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಹಾಗೂ ದೇವರಾಜ ನಗರದ 35ವರ್ಷದ ಮಹಿಳೆಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಇಂದು ಶನಿವಾರ 12 ಜನರ Ryapid ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ಐದು ಜನರಿಗೆ ಸೋಂಕು ಅಂಟಿಕೊಂಡಿದ್ದು ಧೃಡ ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಕುಟುಂಬದ ನಾಲ್ವರಿಗೆ ಸಂಪರ್ಕದಿಂದ ಬಂದಿರುತ್ತದೆ ಎಂದು ತಿಳಿದು ಬಂದಿದೆ.
Social Plugin