ತೇರದಾಳ : ಅದಮ್ಯ ಸಾಹಸ,ಅಪ್ರತಿಮ ಶೌರ್ಯ, ದೇಶಕ್ತಿಯ ಸ್ಪೂರ್ತಿಯೊಂದಿಗೆ ಶತೃಗಳನ್ನು ಸೆದೆಬಡಿದು ಭಾರತಾಂಭೆಯ ಘಣತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ಧದ ವೀರ ಹುತಾತ್ಮರಿಗೆ ಕಾರ್ಗಿಲ್ ವಿಜಯ ದಿವಸದಂದು ಶತ ನಮನಗಳನ್ನು ತಿಳಿಸುತ್ತ ಪಟ್ಟಣದ ಮಾಜಿ ಯೋಧ ಹಾಗೂ ಸಮಾಜ ಸೇವಕ ಇಂಚಗೇರಿ ಸಂಪ್ರದಾಯದ ಭಕ್ತರಾದ ದಿ.ಸುರೇಂದ್ರ ಸಿದ್ರಾಮ ತಳವಾರ (70) ಇವರು ಶನಿವಾರ ದಿವಸ ಮೃತರಾದರು.
ಮೃತರು 1951ರಲ್ಲಿ ಅಥಣಿ ತಾಲೂಕಾ ಖವಟಕೊಪ್ಪದಲ್ಲಿ ಜನಸಿ 1971ರಲ್ಲಿ ಸೇನೆಗೆ ಸೇರಿ 17ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ 1988ರಲ್ಲಿ ನಿವೃತ್ತಿಯಾದರು. ಬೆಂಗಳೂರು, ಆಸ್ಸಾಂ, ಡೆಹ್ರಾಡೂನ್, ಪಂಜಾಬ್,ಬಿಹಾರ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸೇವೆಸಲ್ಲಿಸಿದ್ದಾರೆ.
ನಿವೃತ್ತಿಯಾಗಿ ಬಂದು ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರು. ಅಗಷ್ಟ 15 ಹಾಗೂ ಜನೇವರಿ 26ರಂದು ಮಹಾತ್ಮಾ ಗಾಂಧಿಜೀ ಕ್ರಿಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದ ಕವಾಯತ್ ಸೇರಿದಂತೆ ಹಲವಾರು ದೇಶಭಕ್ತಿ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಮಾಡುತ್ತ ಎಲ್ಲರ ಮನೆ ಮಾತಾಗಿದ್ದರು. ಇವರಿಗೆ ಶಾಲಾ ವಿದ್ಯಾರ್ಥಿಗಳೆಂದರೆ ಪಂಚ ಪ್ರಾಣ. ಇವರು ಶಿಸ್ತಿನ ಸಿಪಾಯಿಯಾಗಿದ್ದರು. ಸೇನೆಗೆ ಸೇರಿದ ಯುವಕರು ಪಟ್ಟಣಕ್ಕೆ ರಜೆಯ ಮೇಲೆ ಬಂದಿದ್ದರೆ ಅವರನ್ನು ಕರೆದು ತಂದು ಸತ್ಕಾರ ಮಾಡುವುದು ಇವರಿಗೆ ಸಂತೋಷ. ಮುಂದೆ ಸೇನೆಗೆ ಸೇರ ಬಯಸಿದವರಿಗೆ ಇವರೊಬ್ಬ ಮಾರ್ಗದರ್ಶಿ.
ಇವರು ಶ್ರೀಅಲ್ಲಮಪ್ರಭು ದೇವಸ್ಥಾನ ನೂತನ ಕಟ್ಟಡ ಸಮಯದಲ್ಲಿ ತಮ್ಮ ತನು ಮನ ಧನದಿಂದ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ. ಇವರಿಗೆ ಮಕ್ಕಳಿಲ್ಲದ ಕಾರಣ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಆ ಮಗುವಿಗೆ ಶಾಲೆಯನ್ನು ಸಹ ಕಲಿಸುತ್ತಿದ್ದಾರೆ. ಬಡವರನ್ನು ಕಂಡರೆ ತಮ್ಮಲ್ಲಿ ಇದ್ದದ್ದನ್ನು ಕೊಟ್ಟು ಕಳುಹಿಸುತ್ತದ್ದರು. ಬಡ ವಿದ್ಯಾರ್ಥಿಗಳಿಗೆ ಶಾಲಾ ಫೀ. ಹಣವನ್ನು ಹಾಗೂ ಪುಸ್ತಕ ಪೆನ್ನುಗಳನ್ನು ಸಹ ಕೊಡಿಸಿ ಶಾಲೆಗೆ ಕಳುಹಿಸುತ್ತಿದ್ದರು.
ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗುವ ದಾರಿ ಮಧ್ಯದಲ್ಲಿ ಶನಿವಾರ ಜು.25ರಂದು ಮಾಜಿ ಯೋಧ ಸುರೇಂದ್ರ ತಳವಾರ ಇವರು ಮೃತರಾದರು. ಪತ್ನಿ ಹಾಗೂ ಓರ್ವ ದತ್ತು ಪುತ್ರಿ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Social Plugin