ಹಿಪ್ಪರಗಿ ಗ್ರಾಮದಲ್ಲಿ ಕೊರೊನಾ ಭಯದಲ್ಲಿ ಗ್ರಾಮಸ್ಥರು ಮನೆ ಬಿಟ್ಟು ಹೊರಬಾರದಿರುವದು. ಬಿಕೋ ಎನ್ನುತ್ತಿರುವ ರಸ್ತೆ.
ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದ ನಾಲ್ವರಿಗೆ ಕೊರೊನಾ
*ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು 20 ದಿನ ಕಳೆದರೂ ಭಯದಲ್ಲಿ ಗ್ರಾಮಸ್ಥರು
ರಬಕವಿ-ಬನಹಟ್ಟಿ,ಜು21: ಕಳೆದ ಜು.2 ರಂದು ನಿಧನರಾಗಿದ್ದ 94 ವರ್ಷದ ಅಜ್ಜಿಗೆ ಅಂತ್ಯ ಸಂಸ್ಕಾರದ ನಂತರ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನಲೆ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ 13 ಜನ ಕುಟುಂಬಸ್ಥರೊಂದಿಗೆ ಒಟ್ಟು 68 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.
ಕುಟುಂಬದ 13 ಜನರ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆಯನ್ನು ಕಳಿಸಲಾಗಿತ್ತು. 13 ಜನರಲ್ಲಿ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಪಟ್ಟಿತ್ತು.
ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದು 70 ಕ್ಕೂ ಅಧಿಕ ಜನರ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆ ನಂತರ ಸಾಂಸ್ಥಿಕ ಕ್ವಾರಂಟೈನ್ ಅವಧಿಯು ಕಳೆದ ಶುಕ್ರವಾರ ಮುಕ್ತಾಯಗೊಂಡ ಹಿನ್ನಲೆ ಶನಿವಾರದಂದು ಹೋಂ ಕ್ವಾರಂಟೈನ್ ಮಾಡಲಾಗಿತ್ತಾದರೂ ಸೋಮವಾರ ರಾತ್ರಿ ದಿಢೀರ್‍ನೆ ಮೃತರಾದ ಅಜ್ಜಿಯ ಕುಟುಂಬಸ್ಥರ ಪೈಕಿ ಇಬ್ಬರು ಹಾಗು ಮತ್ತಿಬ್ಬರು ಸೇರಿದಂತೆ ನಾಲ್ವರಿಗೆ ಕೊರೊನಾ ಒಕ್ಕರಿಸಿದ ಮಾಹಿತಿ ಬಂದ ಪರಿಣಾಮ ತಾಲೂಕಾಡಳಿತ ಅವರನ್ನು ಬಾಗಲಕೋಟೆ ಕೋವಿಡ್ ಆಸ್ಪತ್ರೆಗೆ ಕಳಿಸಿದ್ದಾರೆ.
ಭಯದಲ್ಲಿ ಗ್ರಾಮಸ್ಥರು: ಅಜ್ಜಿಯೋರ್ವಳ ಅಂತ್ಯ ಸಂಸ್ಕಾರ ಇಡೀ ಹಿಪ್ಪರಗಿ ಗ್ರಾಮಕ್ಕೆ ಕಂಟಕವಾಗಿದ್ದು, ಇಲ್ಲಿನ ಲಕ್ಕವ್ವ ದೇವಸ್ಥಾನ ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ. 20 ದಿನ ಕಳೆದರೂ ಸದ್ಯ ಇಡೀ ಗ್ರಾಮವೇ ಕೊರೊನಾ ಭಯದಲ್ಲಿದೆ.

Social Plugin