ಬನಹಟ್ಟಿಯಲ್ಲಿ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ತಡೆದು ಮಾನವ ಸರಪಳಿಯಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಆಶಾ ಕಾರ್ಯಕರ್ತೆಯರು.
ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತರ ಧಿಕ್ಕಾರದ ಕೂಗು
ರಸ್ತೆ ಮಧ್ಯ ಮಾನವ ಸರಪಳಿ
ರಬಕವಿ-ಬನಹಟ್ಟಿ,ಜು14: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರಿಂದ ಮಂಗಳವಾರ ಎರಡನೇ ದಿನ ಪ್ರತ್ಯೇಕವಾಗಿ ನಗರದಲ್ಲಿ ಪ್ರತಿಭಟನೆ ನಡೆಸಿ, ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಧಿಕ್ಕಾರದ ಕೂಗು ಹಾಕುವ ಮೂಲಕ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ತಕ್ಷಣವೇ ಪರಿಹರಿಸಬೇಕೆಂದು ಒತ್ತಾಯಿಸಿದರು.
ಲಾಕ್‍ಡೌನ್ ನಂತರ ಸತತ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಕನಿಷ್ಠ ಮಾಸಿಕ 12000 ವೇತನ ನಿಗದಿಪಡಿಸಬೇಕು. ಕೆಲಸದ ವೇಳೆ ಅಗತ್ಯ ಸುರಕ್ಷತಾ ಸಾಧನಗಳನ್ನು ನೀಡಬೇಕು. ಕೊರೊನಾ ಸೋಂಕಿಗೆ ಒಳಗಾದ ಆಶಾ ಕಾರ್ಯಕರ್ತೆಯರ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಬೇಕೆಂಬ ಪ್ರಮುಖ ಬೇಡಿಕೆಗಳಾಗಿವೆ.
ಬೇಬಿಶ್ರೀ ಹಾಸಿಲಕರ, ಲಕ್ಷ್ಮೀ ತಳವಾರ, ಕವಿತಾ ಕಡ್ಲಿಮಟ್ಟಿ, ಮಂಜುಳಾ ಸರಿಕರ, ಗಾಯತ್ರಿ ರಾವಳ, ಸವಿತಾ ಬಾವಲತ್ತಿ, ಸವಿತಾ ಔರಸಂಗ, ಶಿವಲೀಲಾ ಪಾಟೀಲ, ಸಕ್ಕುಭಾಯಿ ಪೂಜಾರಿ ಸೇರಿದಂತೆ ಅನೇಕ ಆಶಾ ಕಾರ್ಯಕರ್ತೆಯರು ಇದ್ದರು.

Social Plugin