ತೇರದಾಳದ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು.

ತೇರದಾಳ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ದ್ವೀತೀಯ ಪಿ.ಯು.ಸಿ. ಫಲಿತಾಂಶ ಶೇ.94.12

ತೇರದಾಳ: ಪಟ್ಟಣದ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಪರೀಕ್ಷೆಗೆ ಕುಳಿತ 34 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಪಾಸಾಗಿದ್ದು, ಕಾಲೇಜಿನ ಒಟ್ಟು ಫಲಿತಾಂಶ 94.12% ರಷ್ಟಾಗಿದೆ ಎಂದು ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಚೇರಮನ್ನರಾದ ಡಾ.ಎಮ್.ಎಸ್.ದಾನಿಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  

 ಆಂಕಿತಾ ಬಾಹುಬಲಿ ಕಡಹಟ್ಟಿ 565(ಶೇ.94.17) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

_______________________________________
ಜಾಹೀರಾತು 👇
______________________________________

 

ಐಶ್ವರ್ಯ ಹನಮಂತ ಬಿಳ್ಳೂರ 556(ಶೇ.92.67) ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. 

ಮಲ್ಲಯ್ಯ ಮುರಗಯ್ಯ ಮಠದ 540(ಶೇ.90) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ. 05 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿದ್ದು, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಚೇರಮನ್ನರಾದ ಡಾ.ಎಮ್.ಎಸ್.ದಾನಿಗೊಂಡ ಹಾಗೂ ಸರ್ವ ಆಡಳಿತ ಮಂಡಳಿ ಪ್ರಾಚಾರ್ಯರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.


- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698