ರಬಕವಿ-ಬನಹಟ್ಟಿ ನೂತನ ತಾಲೂಕು ಪಂಚಾಯ್ತಿಯ ಅಧ್ಯಕ್ಷರಾಗಿ ಶಿವಾನಂದ ಮಂಟೂರ ಉಪಾಧ್ಯಕ್ಷರಾಗಿ ಸುನಂದಾ ಕಲ್ಲಪ್ಪ ಮುಗಳಖೋಡ ಚುನಾಯಿತಗೊಂಡರು.
ಕಮಲ ತೆಕ್ಕೆಗೆ ನೂತನ ರಬಕವಿ-ಬನಹಟ್ಟಿ ತಾಪಂ
ರಬಕವಿ-ಬನಹಟ್ಟಿ,ಜು14: ನಿರೀಕ್ಷೆಯಂತೆ ನೂತನ ತಾಲೂಕಾ ಪಂಚಾಯ್ತಿಯಾಗಿರುವ ರಬಕವಿ-ಬನಹಟ್ಟಿಗೆ ಪ್ರಥಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ನಿರೀಕ್ಷೆಯಂತೆ ಎರಡೂ ಹುದ್ದೆಗಳು ಕಮಲ ಪಾಳಕ್ಕೆ ಒಲಿದಿವೆ.
ಇಂದು ಸ್ಥಳೀಯ ನೂಲಿನ ಗಿರಣಿ ಆವರಣದಲ್ಲಿರುವ ತಾಲೂಕಾ ಪಂಚಾಯ್ತಿ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸಸಾಲಟ್ಟಿ ತಾಪಂನ ಶಿವಾನಂದ ಮಂಟೂರ ಹಾಗು ಕಾಂಗ್ರೆಸ್‍ನ ಜಗದಾಳ ತಾಪಂನ ಸುನಂದಾ ಈಶ್ವರ ಬಂಗಿ ಪೈಪೋಟಿ ನಡೆಸಿದ್ದರು. ಬಿಜೆಪಿಯ ಎಲ್ಲ 8 ಮತಗಳನ್ನು ಮಂಟೂರ ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್‍ನ 6 ಸದಸ್ಯರ ಮತಗಳನ್ನು ಪಡೆದ ಬಂಗಿ ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಹನಗಂಡಿ ತಾಪಂನ ಬಿಜೆಪಿ ಸದಸ್ಯೆ ಸುನಂದಾ ಕಲ್ಲಪ್ಪ ಮುಗಳಖೋಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆಗೊಂಡಿತು.
ಚುನಾವಣಾಧಿಕಾರಿಯಾಗಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಹಾಗು ಆಡಳಿತಾಧಿಕಾರಿಯಾಗಿ ಅಶೋಕ ತೋಟದ ಕಾರ್ಯನಿರ್ವಹಿಸಿದ್ದರು.
ನಿರೀಕ್ಷಿತ ಗೆಲುವು: ನೂತನ ತಾಪಂ ಆಗಿರುವ ರಬಕವಿ-ಬನಹಟ್ಟಿಗೆ 8 ಜನ ಸದಸ್ಯರ ಬಲ ಹೊಂದಿರುವ ಬಿಜೆಪಿಗೆ ನಿರೀಕ್ಷಿತ ಗೆಲವು ಸಾಧಿಸಿದ್ದೇವೆ. ಕಾಂಗ್ರೆಸ್‍ನ ಕೆಲ ಕುತಂತ್ರಿಗಳ ಆಟದಲ್ಲಿ ಪ್ರಾಮಾಣಿಕತೆಯಿಂದ ಬಿಜೆಪಿಯ ಸರ್ವ ಸದಸ್ಯರು ಪಕ್ಷದ ಹಿರಿಯರಂತೆ ಎರಡೂ ಸ್ಥಾನಗಳಿಗೆ ಒಬ್ಬರ ನಾಮಪತ್ರ ಸಲ್ಲಿಸುವ ಮೂಲಕ ಪಾರದರ್ಶಕವಾಗಿ ಅಧಿಕಾರ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಶಾಸಕ ಸಿದ್ದು ಸವದಿ ಹೇಳಿದರು.
ತಾಪಂ ಸದಸ್ಯರಾದ ಭಾರತಿ ಸಣ್ಣಕ್ಕಿ, ಸುವರ್ಣ ಸಂತಪ್ಪ ಶಿಡ್ಲವ್ವಗೋಳ, ಚಿನ್ನವ್ವ ಚನ್ನಬಸಪ್ಪ ಹೊಸಮನಿ, ಗುರುಪಾದಯ್ಯ ಮರಡಿಮಠ, ಹಣಮಂತ ತೇಲಿ, ಕಾಸವ್ವ ಸದಾಶಿವ ಹೆಗಾಡಿ ಹಾಜರಿದ್ದರು.
ಜಿಪಂ ಸದಸ್ಯರಾದ ಪುಂಡಲೀಕ ಪಾಲಭಾಂವಿ, ಪರಶುರಾಮ ಬಸವ್ವಗೋಳ, ಸುರೇಶ ಅಕ್ಕಿವಾಟ, ಆನಂದ ಕಂಪು, ಧರೆಪ್ಪ ಉಳ್ಳಾಗಡ್ಡಿ, ಲಕ್ಕಪ್ಪ ಪಾಟೀಲ, ಪ್ರಕಾಶ ಮಾನಶೆಟ್ಟಿ, ಶಂಕರ ಹುನ್ನೂರ, ಪರಪ್ಪ ಮದಲಮಟ್ಟಿ, ಮಹಾನಿಂಗಪ್ಪ ಸನದಿ, ಪ್ರಭು ಮುಧೋಳ, ಸಂತೋಷ ಜಮಖಂಡಿ ಸೇರಿದಂತೆ ಅನೇಕರಿದ್ದರು.

Social Plugin