ತೇರದಾಳ ಶುಕ್ರವಾರ ಏಳು ಪಾಸಿಟಿವ್ ಪತ್ತೆ, ಒಂದೇ ಕುಟುಂಬದ ಇಬ್ಬರಿಗೆ ಸೋಂಕು
ತೇರದಾಳ : ಕೊರೊನಾ ಮಹಾಮಾರಿ ವೇಗ ಅತೀ ಹೆಚ್ಚಾಗಿದ್ದು, ಯಾರನ್ನು ಬಿಡದೆ ಅಂಟಿಕೊಳ್ಳುತ್ತಿದೆ. ಇಂದು ಏಳು ಜನರಿಗೆ ಕೊರೊನಾ ಸೋಂಕು ಅಂಟಿಕೊಂಡಿದ್ದು, ಪಟ್ಟಣದ ಒಂದೇ ಕುಟುಂಬದ ಇಬ್ಬರಂತೆ ಎರಡು ಕುಟುಂಬದಲ್ಲಿ ನಾಲ್ವರಿಗೆ ಸೋಂಕು ವಕ್ಕರಿಸಿ ಜನತೆ ಬೆಚ್ಚಿ ಬೀಳುವಂತಾಗಿದೆ.
ಪಟ್ಟಣದ ಹಳೆಪೇಠ ಗಲ್ಲಿಯ ಹಳೆ ಡಿಸಿಸಿ ಬ್ಯಾಂಕ ಹತ್ತಿರ 37ವರ್ಷದ ಪುರುಷನಿಗೆ ಸೋಂಕು ಅಂಟಿಕೊಂಡಿದ್ದರೆ, ಹಳೆಪೇಠೆಯ ಹಳೆಯ ಡಿಸಿಸಿ ಬ್ಯಾಂಕ ಹತ್ತಿರವಿರುವ ಒಂದೇ ಕುಟುಂಬದ 65ವರ್ಷದ ಪುರುಷನಿಗೆ ಸೋಂಕು ಧೃಡಪಟ್ಟಿದ್ದು ಅದೇ ಕುಟುಂಬದ 30ವರ್ಷದ ಯುವಕನಿಗೆ ಸೋಂಕು ಅಂಟಿಕೊಂಡಿದ್ದು ತಿಳಿದು ಬಂದಿದೆ. ಭೂಮಾತಾ ಚಿತ್ರ ಮಂದಿರ ಹತ್ತಿರದ 28ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ. ಕಿಲ್ಲಾ ಭಾಗದ 38 ವರ್ಷದ ಪುರುಷನಿಗೆ ಸೋಂಕು ಕೊರೊನಾ ವೈರಸ್ ಅಂಟಿಕೊಂಡಿದ್ದರೆ, ಹಳೆಪೇಠ ಗಲ್ಲಿಯ ದೊಡ್ಡಮನಿ ಹತ್ತಿರ ಒಂದೇ ಕುಟುಂಬದ 44ವರ್ಷದ ಮಹೀಳೆ ಹಾಗೂ 45ವರ್ಷದ ಪುರುಷನಿಗೆ ವೈರಾಣು ಅಂಟಿಕೊಂಡಿದ್ದು ಜನರಲ್ಲಿ ಭಯವನ್ನುಂಟು ಮಾಡಿದೆ.
ಕೆಲವು ಸೋಂಕಿತರು ಕ್ವಾರಂಟೈನ್‍ದಲ್ಲಿದ್ದವರನ್ನು ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಅಂಟಿಕೊಂಡಿದ್ದು ತಿಳಿದು ಬಂದಿದೆ. ಇನ್ನು ಕೆಲವು ಸೋಂಕಿತರು ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಬನಹಟ್ಟಿಯಲ್ಲಿ ರ್ಯಾಪಿಡ್ ಪರೀಕ್ಷೆ ಮಾಡಿಕೊಂಡಾಗ ಸೋಂಕು ಅಂಟಿಕೊಂಡಿದ್ದು ತಿಳಿದು ಬಂದಿದೆ. ತೇರದಾಳ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಮೂರು ಜನರು ರ್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಾಗ ಕೊರೊನಾ ಸೋಂಕು ತಿಳಿದುಬಂದಿದೆ ಎಂದು ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ತಿಳಿಸಿದ್ದಾರೆ. ಇನ್ನು ಲಕ್ಷಣಗಳು ಕಂಡುಬಂದಿರುವ ಸೋಂಕಿತರು ಸ್ವಯಂ ಆಗಿ ಬನಹಟ್ಟಿಯಲ್ಲಿ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಿಳಿದು ಬಂದಿದೆ ಎಂದು ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ ತಿಳಿಸಿದ್ದಾರೆ. ಈ ಏಳು ಜನರನ್ನು ರಬಕವಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Social Plugin