ತೇರದಾಳ ಪಟ್ಟಣದಲ್ಲಿಂದು ದಲಿತ ಮುಖಂಡರು ಸೇರಿ ತೇರದಾಳ ಪಟ್ಟಣದ ಹೆಸ್ಕಾಂ ಕಚೇರಿಯ ಸಿಬ್ಬಂದಿಯವರ ಮುಖಾಂತರ ಜಿಲ್ಲಾ ವರಿಷ್ಠ ಅಭಿಯಂತರರು (ಹೆಸ್ಕಾಂ) ಬಾಗಲಕೋಟೆ ಹಾಗೂ ಸಹಾಯಕ ಅಭಿಯಂತರರು ಹೆಸ್ಕಾಂ ರಬಕವಿಯವರಿಗೆ ವಾರದ ಪ್ರತಿ ಶನಿವಾರ ಹಾಗೂ ರವಿವಾರ ದಿವಸ ಸಾಯಂಕಾಲ 6.00 ರಿಂದ 7.00 ರವರೆಗೆ. ಮತ ಕ್ಷೇತ್ರದಾದ್ಯoತ ವಿದ್ಯುತ್ ವ್ಯತ್ಯಯ ಮಾಡದಂತೆ ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಚಾಲಕರಾದ ಸಿದ್ಧಾರ್ಥ ದೊಡಮನಿ ಯವರು ಪ್ರಸ್ತುತ ಕನ್ನಡದ ಜೀ ಕನ್ನಡ ವಾಹಿನಿಯಲ್ಲಿ ಮಹಾಮಾನವತಾವಾದಿ, ಸಮಾನತೆಯ ಹರಿಕಾರ, ಮಹಾನ್ ಚೇತನ ಡಾ: ಬಾಬಾಸಾಹೇಬ್ ಅಂಬೇಡ್ಕರವರ ಕುರಿತು ಪ್ರತಿವಾರ ಶನಿವಾರ ಮತ್ತು ರವಿವಾರ ದಿವಸದಂದು ಸಾಯಂಕಾಲ 6:00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಧಾರಾವಾಹಿ ಪ್ರಸಾರವಾಗುತ್ತಲಿದೆ.ಇಂದಿನ ಮೂಢನಂಬಿಕೆಯ ಮೌಢ್ಯದಲ್ಲಿ ಮುಳುಗಿರುವ ಜನತೆಗೆ ಹೊಸ ಬೆಳಕಿನ ಅವಶ್ಯಕತೆ ಇದೆ. ಈ ಪ್ರಪಂಚಕ್ಕೆ ಹೊಸ ಬೆಳಕನ್ನು ಕೊಟ್ಟಿರುವಂತಹ ಡಾಕ್ಟರ್ ಬಾಬಾ ಸಾಹೇಬರ ಚರಿತ್ರೆಯನ್ನು ಪ್ರತಿಯೊಬ್ಬರು ನೋಡಲೇಬೇಕಾದಂತಹ ಅವಶ್ಯಕತೆ ಇದೆ.ಆದರೆ ಈ ಧಾರಾವಾಹಿಯು ಪ್ರಸಾರವಾಗುವ ಸಮಯದಲ್ಲಿಯೇ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಲಿದೆ. ಇದರಿಂದ ಈ ಮಹಾನ್ ನಾಯಕನ ಚರಿತ್ರೆ ತಿಳಿಯಲು ನಮಗೆ ತುಂಬಾ ಅನಾನುಕೂಲವಾಗುತ್ತದೆ.ಕೇವಲ ಚಾರಿತ್ರವನ್ನು, ಸಂಸ್ಕಾರವನ್ನು ಹಾಳು ಮಾಡುವಂತಹ ಚಿತ್ರಗಳನ್ನು, ಧಾರಾವಾಹಿಗಳನ್ನು ವೀಕ್ಷಿಸಿ ಮನೆಯಲ್ಲಿರುವ ಯುವಪೀಳಿಗೆ ಹಾದಿ ತಪ್ಪುತ್ತಲಿವೆ. ಇಂತಹ ಸಂದರ್ಭದಲ್ಲಿ ಇಂಥ ಮಹಾನಾಯಕರ, ಸಮಾಜ ಚಿಂತಕರ, ಸಾಧನೆಗೈದ ಮಹಾಪುರುಷರ ಜೀವನ ಚರಿತ್ರೆಯ ಧಾರವಾಹಿಗಳನ್ನು ನೋಡುವುದರಿಂದ ಮಕ್ಕಳ ಮನಸ್ಸು ಪರಿವರ್ತನೆಯಾಗಿ ನಾಡಿಗೆ ಮುಂದೆ ಒಳ್ಳೆಯ ಸಂದೇಶ ನೀಡಬಹುದು. ಕಾರಣ ಪ್ರಸ್ತುತ ಇಡೀ ವಿಶ್ವಕ್ಕೆ ಮಾನವೀಯತೆ ಸಂದೇಶ ನೀಡಿ ಮಾನವಕುಲದ ಉದ್ಧಾರಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಬಾಬಾಸಾಹೇಬರ ಜೀವನಚರಿತ್ರೆಯನ್ನು ನೋಡುವುದು ತುಂಬಾ ಮುಖ್ಯವಾಗಿದೆ. ಕಾರಣ ಹೆಸ್ಕಾಂ ಇಲಾಖೆಯವರು ದಯವಿಟ್ಟು ಈ ಸಂಬಂಧಿಸಿದ ಸಮಯದಲ್ಲಿ ತೇರದಾಳ ಮತಕ್ಷೇತ್ರದಾದ್ಯಂತ ಯಾವುದೇ ಕಾರಣಕ್ಕೂ ವಿದ್ಯುತ್ತನ್ನು ನಿಲುಗಡೆ ಮಾಡಬಾರದು ಎಂದು ಈ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ದಯಾನಂದ ಕಾಳೆ, ತುಕಾರಾಂ ಸಿಂಗೆ, ಸುನಿಲ ರೋಡಕರ ಪ್ರವೀನ ಸುತಾರ ಸೇರಿದಂತೆ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.

Social Plugin