ಬೀದಿಬದಿ ವ್ಯಾಪಾರಸ್ಥರಿಗೆ ಕಿರುಸಾಲ ಸೌಲಭ್ಯ
ರಬಕವಿ-ಬನಹಟ್ಟಿ,ಜು8: ರಬಕವಿ-ಬನಹಟ್ಟಿ ನಗರಸಭೆಯು 2020-21 ನೇ ಸಾಲಿನ ಡೇ-ನಲ್ಮ್ ಅಭಿಯಾನದಡಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ (Pಒ Sಗಿಂ ಓiಜhi) ಯೋಜನೆಯಡಿ 10 ಸಾವಿರ ರೂ.ಗಳ ವಿಶೇಷ ಕಿರುಸಾಲ ಸೌಲಭ್ಯ ಯೋಜನೆ ಸಾಲ ಮತ್ತು ಸಹಾಯಧನ ಪಡೆಯಲು ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಕ್ಯಾಶ್‍ಬ್ಯಾಕ್ ಮತ್ತು ಶೇ. 7 ರಷ್ಟು ಬಡ್ಡಿ ಸಹಾಯಧನ ನೀಡಲಾಗುತ್ತಿದೆ.
ಅರ್ಜಿಯನ್ನು ಈಗಾಗಲೇ ನಗರಸಭೆಯಲ್ಲಿ ವಿತರಿಸಲಾಗುತ್ತಿದ್ದು, ಜುಲೈ 30 ರ ವರೆಗೆ ಅರ್ಜಿ ಪಡೆಯಬಹುದಾಗಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ದಿನಾಂಕ 30-07-2020 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ಯೋಜನೆ ವಿಭಾಗದಲ್ಲಿ ಸಂಪರ್ಕಿಸುವಂತೆ ರಬವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದ್ದಾರೆ

Social Plugin