ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ತಾಲೂಕ ಘಟಕ ರಿ, ತೇರದಾಳ ವತಿಯಿಂದ ಪಟ್ಟಣದ ಮಲ್ಲಪ್ಪಣ್ಣ ಬೀಳಗಿಯವರ ನಿವಾಸದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಮನೆ ಮನೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ತೇರದಾಳ : ಎಂತಹ ಕಠಿಣ ಸಂದರ್ಭವಿದ್ದರು ತಮ್ಮ ಪ್ರಾಣದ ಹಂಗು ತೊರೆದು ನಮಗೆಲ್ಲ ಪತ್ರಿಕೆಯ ಮುಖಾಂತರ ಸುದ್ದಿ ಮುಟ್ಟಿಸುವವರು ನಮ್ಮ ಪತ್ರಕರ್ತರು. ಈ ಹಿಂದಿನ ಹಲವಾರು ಘಟಣೆಗಳನ್ನು ಸ್ಮರಿಸಬಹುದು. ಕಾರ್ಗಿಲ್ ಯುದ್ಧದಲ್ಲಿಯೂ ಸಹ ಹೋಗಿ ಸುದ್ದಿಯನ್ನು ಸಂಗ್ರಹಿಸಿ ಬಿತ್ತಿರಿಸಿದವರು, ಈಗಿನ ಕೊರೊನಾ ಸಂದರ್ಭದಲ್ಲಿಯೂ ಸಹ ದೃತಿಗೆಡದೆ ತಮ್ಮ ಸೇವೆಯನ್ನು ಸಲ್ಲಿಸಿ ತೆರೆಮರೆಯ ನಾಯಕರಾಗಿದ್ದಾರೆ. ಈ ವರದಿಗಾರರನ್ನು ಎಷ್ಟು ಅಭಿನಂದಿಸಿದರು ಕಡಿಮೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಬಾಗಲಕೋಟ ಜಿಲ್ಲಾ ಘಟಕದ ಅಧ್ಯಕ್ಷರಾದ ಆಯ್.ಎನ್. ಲಟ್ಟಿ ಅವರು ತಿಳಿಸಿದರು.

     ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ತಾಲೂಕ ಘಟಕ ರಿ, ತೇರದಾಳ ವತಿಯಿಂದ ಪಟ್ಟಣದ ಮಲ್ಲಪ್ಪಣ್ಣ ಬೀಳಗಿಯವರ ನಿವಾಸದಲ್ಲಿ ಅತಿ ಸರಳ ರೀತಿಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಮನೆ ಮನೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದು ಕೊರೊನಾ ವೈರಸ್‍ದಿಂದ ಜನರೆಲ್ಲ ಪ್ರಾಣ ಭಯದಿಂದ ಜನರೆಲ್ಲ ತತ್ತರಿಸಿ ಹೋಗಿದ್ದಾರೆ. ಇಡೀ ದೇಶವೇ ಲಾಕ್‍ಡೌನ್ ಆಗಿದೆ, ಎಲ್ಲರ ಸುರಕ್ಷತಾ ಹಿತದೃಷ್ಟಿಯಿಂದ ಮನೆಯಲ್ಲಿಯೇ ಇರಬೇಕು ಎಂದು ಸರಕಾರ ಕಟ್ಟುನಿಟ್ಟಾಗಿ ಆದೇಶ ಮಾಡಿದೆ. ಇಂತಹ ಭಯಾನಕ ಪರಿಸ್ಥಿತಿಯಲ್ಲಿಯೂ ಸಹ ಪತ್ರಿಕಾ ಮಾಧ್ಯಮ ಮಿತ್ರರು ಕರ್ತವ್ಯ ನಿರ್ವಹಿಸಿ ಸುದ್ದಿಯನ್ನು ನೀಡಿ ದಿಟ್ಟತನವನ್ನು ಮೆರೆದಿದ್ದಾರೆ. ಯಾವಾಗಲೂ ಸಮಾಜದ ಏಳ್ಗೆಗಾಗಿ ಸದಾ ಶ್ರಮಿಸುವ ಪತ್ರಿಕೆಗಳು ನಾಡಿನ ಒಳಿತಿಗಾಗಿ ಬೆಳಕು ಬೀರುತ್ತಲಿವೆ. ಇಂತಹ ಬೆಳಕನ್ನು ಕೊಡುತ್ತಿರುವ ಮಾಧ್ಯಮ ಕ್ಷೇತ್ರದ ಎಲ್ಲರೂ ನಿಜವಾದ ಹಿರೋಗಳಾಗಿದ್ದಾರೆ ಎಂದು ಎಂದರು.

  ಎಸ್.ಆರ್.ಕಮದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಟಿ.ಪತ್ತಾರ ಹಾಗೂ ಪ್ರವೀಣ ಬುದ್ನಿ, ಕೆ.ಎಸ್.ರಂಗಸ್ವಾಮಿ, ಅಮರ ಇಂಗಳೆ ಮಾತನಾಡಿದರು. ಮಲ್ಲಪ್ಪ ಬೀಳಗಿ, ವಿದ್ಯಾ ನಕಾಸೆ, ಜ್ಯೋತಿ ಗೌಡಪ್ಪನವರ, ಶಿವಾನಂದ ಚಿಂಚಲಿ, ಪ್ರಕಾಶ ಪವಾರ, ಭುವನೇಶ್ವರಿ ಬೀಳಗಿ ಸೇರಿದಂತೆ ಇನ್ನಿತರರು ಇದ್ದರು.  ಜ್ಯೋತಿ ಬೀಳಗಿ ಸ್ವಾಗತಿಸಿದರು ನಿರೂಪಿಸಿದರು.


- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698