ಹಿಪ್ಪರಗಿ ಗ್ರಾಮದಲ್ಲಿ ಕೊರೊನಾ ಭಯದಲ್ಲಿ ಗ್ರಾಮಸ್ಥರು ಮನೆ ಬಿಟ್ಟು ಹೊರಬಾರದಿರುವದು. ಬಿಕೋ ಎನ್ನುತ್ತಿರುವ ರಸ್ತೆ.
ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಮೂವರಿಗೆ ಕೊರೊನಾ: ಭಯದಲ್ಲಿ ಗ್ರಾಮಸ್ಥರು
ತಹಶೀಲ್ದಾರ ಹಾಗು ಗ್ರೇಡ್-2 ಹೋಂ ಕ್ವಾರಂಟೈನ್
ರಬಕವಿ-ಬನಹಟ್ಟಿ,ಜು8: ಜು.2 ರಂದು ನಿಧನರಾಗಿದ್ದ 94 ವರ್ಷದ ಅಜ್ಜಿಗೆ ಅಂತ್ಯ ಸಂಸ್ಕಾರದ ನಂತರ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನಲೆ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ 13 ಜನ ಕುಟುಂಬಸ್ಥರೊಂದಿಗೆ ಒಟ್ಟು 68 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.
ಕುಟುಂಬದ 13 ಜನರ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆಯನ್ನು ಕಳಿಸಲಾಗಿತ್ತು. 13 ಜನರಲ್ಲಿ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಭಯದಲ್ಲಿ ಗ್ರಾಮಸ್ಥರು: ಅಜ್ಜಿಯೋರ್ವಳ ಅಂತ್ಯ ಸಂಸ್ಕಾರ ಇಡೀ ಹಿಪ್ಪರಗಿ ಗ್ರಾಮಕ್ಕೆ ಕಂಟಕವಾಗಿದ್ದು, ಇಲ್ಲಿನ ಲಕ್ಕವ್ವ ದೇವಸ್ಥಾನ ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ. ಸದ್ಯ ಇಡೀ ಗ್ರಾಮವೇ ಕೊರೊನಾ ಭಯದಲ್ಲಿದೆ. 68 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಇವರ ಗಂಟಲು ದ್ರವ ಹಾಗು ರಕ್ತದ ಮಾದರಿಯನ್ನು ಸ್ವ್ಯಾಬ್‍ಗೆ ಕಳಿಸಿಲ್ಲ. ಕುಟುಂಬಸ್ಥರಲ್ಲಿ ಆತಂಕದ ಛಾಯೆ ಮೂಡಿದೆ.
ಸ್ವಯಂ ಪ್ರೇರಿತ ಬಂದ್: ಗ್ರಾಮದಲ್ಲಿನ ಅಂಗಡಿಗಳನ್ನು ಕೊರೊನಾ ಭಯದಿಂದ ಸ್ವಯಂಪ್ರರಿತವಾಗಿ ಬಂದ್ ಮಾಡಿದ್ದಾರೆ. ತಾಲೂಕಾಡಳಿತ ಹಾಗು ಸ್ಥಳೀಯ ಗ್ರಾಮ ಪಂಚಾಯ್ತಿ ವತಿಯಿಂದ ಜನತೆಗೆ ಎಚ್ಚರಿಕೆ ನೀಡುವದರ ಜೊತೆಗೆ ಮಾಸ್ಕ್, ಸ್ಯಾನಿಟೈಜರ್ ಹಾಗು ಸಾಮಾಜಿಕ ಅಂತರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕೆಂದು ಮನವರಿಕೆ ಮಾಡುತ್ತಿದೆ.
ತಹಶೀಲ್ದಾರ ಹೋಂ ಕ್ವಾರಂಟೈನ್: ಕೊರೊನಾ ವಾರಿಯರ್ ಆಗಿ ಅವಿರತ ಸೇವೆ ಸಲ್ಲಿಸಿದ್ದ ಜಮಖಂಡಿ ತಾಲೂಕಾ ವೈದ್ಯಾಧಿಕಾರಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನಲೆ ರಬಕವಿ-ಬನಹಟ್ಟಿ ತಾಲೂಕಿನ ತಹಶೀಲ್ದಾರ ಹಾಗು ಗ್ರೇಡ್-2 ತಹಶೀಲ್ದಾರ ಇಬ್ಬರೂ ಹೋಂ ಕ್ವಾರಂಟೈನ್ ಆಗಿದ್ದಾರೆ.
ಕಳೆದ ಮೂರು ತಿಂಗಳಿಂದ ನಿರಂತರ ಸೇವೆಯನ್ವಯ ಕಳೆದ ಒಂದು ವಾರದಿಂದಲೂ ಜಂಟಿಯಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದರು. ಹಿರಿಯ ಅಧಿಕಾರಿಗಳು ಸೇರಿ ಸೇವೆ ಒದಗಿಸುವ ಸಂದರ್ಭ ತಾಲೂಕಾ ವೈದ್ಯಾಧಿಕಾರಿಗೆ ಸೋಂಕು ತಗುಲಿದ ಕಾರಣ ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್ ಆಗಿದ್ದಾರೆ.
ಸಾಂಸ್ಥಿಕ ಕ್ವಾರಂಟೈನ್ ಪರದಾಟ: ಕಳೆದ 25 ದಿನಗಳಿಂದಲೂ ಸ್ವ್ಯಾಬ್ ಪರೀಕ್ಷೆಯಲ್ಲಿಯೇ ಇರುವ ಸರ್ಕಾರದ ವಿರುದ್ಧ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಘಟನೆ ರಬಕವಿ-ಬನಹಟ್ಟಿಯಲ್ಲಿ ನಡೆದಿದೆ.
ಕ್ವಾರಂಟೈನ್‍ಗಳ ನಿಯಮಗಿಂತಲೂ ಹೆಚ್ಚಿನ ದಿನಗಳನ್ನು ಕಳೆದಿದ್ದೇವೆ ಆದರೂ ಮನೆಗೆ ಕಳಿಸುವ ವ್ಯವಸ್ಥೆ ಮಾಡುತ್ತಿಲ್ಲವೆಂಬುದು ಕ್ವಾರಂಟೈನೀಗಳದ್ದಾಗಿದ್ದರೆ, ವರದಿಯ ಗೊಂದಲದಲ್ಲಿ ಹಾಗು ಸಮುದಾಯದ ಹಿತಾಸಕ್ತಿಗೋಸ್ಕರ ವ್ಯವಸ್ಥಿತವಾಗಿ ಕಾರ್ಯ ನಡೆಸುತ್ತಿದ್ದೇವೆಂಬುದು ಅಧಿಕಾರಿಗಳ ಹೇಳಿಕೆಯಾಗಿದೆ.

- ನಿಮ್ಮ ಜಾಹೀರಾತುಗಳಿಗಾಗಿ 
ಸಂಪರ್ಕಿಸಿ +91 9902523698