ಬನಹಟ್ಟಿಯ ಮಹ್ಮದ್ ಮಹಾಲಿಂಗಪೂರ ಮನೆಗೆ ವಿದ್ಯುತ್ ಬಿಲ್ ಶಾಕ್ ನೀಡಿದ್ದು.
ಹೆಸ್ಕಾಂನಿಂದ ಗ್ರಾಹಕನಿಗೆ ಬಿಲ್ ಶಾಕ್: ತಿಂಗಳಿಗೆ ಬಂದದ್ದು 1.88 ಲಕ್ಷ
ರಬಕವಿ-ಬನಹಟ್ಟಿ,ಜು8: ಲಾಕ್‍ಡೌನ್‍ನಿಂದ ಈಗಷ್ಟೇ ಹೊರ ಬಂದಿರುವ ಜನತೆಗೆ ಹೆಸ್ಕಾಂ ಶಾಕ್ ನೀಡುತ್ತಿದೆ.  ವಿದ್ಯತ್ ಬಿಲ್ ನೀಡಿ ಹೆಸ್ಕಾಂ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.
ಬಿಲ್ ನೋಡಿ ಗ್ರಾಹಕ ಶಾಕ್ ಆಗಿದ್ದು, ಒಂದೇ ತಿಂಗಳ ಬಳಕೆಗೆ 1 ಲಕ್ಷ 88 ಸಾವಿರ ಬಿಲ್ ನೀಡಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಸಿಬ್ಬಂದಿಗಳು ಯಡವಟ್ಟು ಮಾಡಿದ್ದಾರೆ. ಬನಹಟ್ಟಿಯ ಇಟ್ನಾಳ ಗಲ್ಲಿಯ ನಿವಾಸಿ ಮಹ್ಮದ್ ಮಹಾಲಿಂಗಪೂರ ಎಂಬುವರ ಮನೆಗೆ ಹೆಸ್ಕಾಂ ಈ ರೀತಿ ಬಿಲ್ ನೀಡುವ ಮೂಲಕ ಶಾಕ್ ನೀಡಿದೆ.
ಮಹ್ಮದ್ ಮಹಾಲಿಂಗಪೂರ ಮನೆಗೆ ಬಂದ ಹೆಸ್ಕಾಂ ಸಿಬ್ಬಂದಿ ನೀಡಿದ ಬಿಲ್ ನೋಡಿ ಗ್ರಾಹಕರು ಸಹ ಶಾಕ್ ಆಗಿದ್ದಾರೆ. ಇದು ಹೆಸ್ಕಾಂ ಸಿಬ್ಬಂದಿ ಮಾಡಿದ ಯಡವಟ್ಟು ಮಾಡಿಕೊಂಡು ಇದೀಗ ಪೇಚಿಗೆ ಸಿಲುಕಿದೆ.

- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698