ತೇರದಾಳ ಪಟ್ಟಣದ ವಿಠೋಭಾ ದೇವಸ್ಥಾನದ ಹತ್ತಿರವಿರುವ ಸೋಂಕಿತ ಮನೆಗೆ ಪುರಸಭೆಯವರು ಸ್ಯಾನಿಟೈಜರ್ ಸಿಂಪರಣೆ ಮಾಡುತ್ತಿರುವುದು.



ಖಾಸಗಿ ವೈದ್ಯ ಸೇರಿ ಮೂರು  ಜನರಿಗೆ ಅಂಟಿದ ಸೋಂಕು

ತೇರದಾಳ : ಪಟ್ಟಣದಲ್ಲಿ ಮಹಾಮಾರಿ ಕೊರೊನಾ ಅರ್ಭಟ ಮುಂದುವರೆದಿದ್ದು ನಿನ್ನೆ ಬುಧವಾರ ಸಾಯಂಕಾಲ ಖಾಸಗಿ ವೈದ್ಯ ಸೇರಿದಂತೆ ಮೂರು ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ತಿಳಿಸಿದ್ದಾರೆ.

  ವಿಠೋಭಾ ದೇವಸ್ಥಾನದ ಹತ್ತಿರ 35ವರ್ಷದ ಪುರುಷನಿಗೆ ಸೋಂಕು ತಗುಲಿದರೆ ಭೂಮಾತಾ ಚಿತ್ರ ಮಂದಿರ ಹತ್ತಿರ 61 ವರ್ಷದ ಪುರುಷನಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ.  ಬುರ್ಸಿ ಗಲ್ಲಿಯಲ್ಲಿರುವ 53ವರ್ಷದ ಖಾಸಗಿ ವೈದ್ಯನಿಗೆ ಸೋಂಕು ವಕ್ಕರಿಸಿದ್ದರಿಂದ ಪಟ್ಟಣದ ಜನತೆ ಚಿಂತಾಕ್ರಾಂತರಾಗಿದ್ದಾರೆ.


  ವಿಠ್ಠಲ ಮಂದಿರದ ಹತ್ತಿರವಿರುವ ಸೋಂಕಿತನಿಗೆ ಕೆಮ್ಮ, ಜ್ವರದಿಂದ ಸಂಶಯಗೊಂಡು ರ್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾಗ ಕೊರೊನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಇನ್ನುಳಿದವರು ಈಗಾಗಲೇ ಕ್ವಾರಂಟೈನದಲ್ಲಿದ್ದರು. ಅವರ ಗಂಟಲು ದ್ರವ ಮಾದರಿ ಪರೀಕ್ಷೆಯಿಂದ ಸೋಂಕು ಅಂಟಿಕೊಂಡಿದ್ದು ತಿಳಿದು ಬಂದಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ರಬಕವಿ ಕೋವಿಡ್ ಕೇರ್ ಸೆಂಟರ್‍ದಲ್ಲಿ ಸೇರಿಸಲಾಗಿದೆ. ಹಾಗೂ ಸೋಂಕಿತರು ವಾಸಿಸುವ ಪ್ರದೇಶವನ್ನು ಪುರಸಭೆ ವತಿಯಿಂದ  ಸ್ಯಾನಿಟೈಜರ್ ಹಾಗೂ ವಾಸಿಸುವ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ ತಿಳಿಸಿದ್ದಾರೆ.