ಬನಹಟ್ಟಿಯಲ್ಲಿ ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತರಿಗೆ ವಿನೂತನವಾಗಿ ಸಂದೇಶ ರವಾನಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪತ್ರಿಕೆಗಳ ಅಳಿವು-ಉಳಿವಿನ ಸ್ಥಿತಿಯಿರುವದು ವಿಷಾದ
*ರಬಕವಿ-ಬನಹಟ್ಟಿ ತಾಲೂಕಾ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ
ರಬಕವಿ-ಬನಹಟ್ಟಿ,ಜು11: ಆತ್ಮವಂಚನೆ, ಒಲೈಕೆಗಾಗಿ ಸುದ್ದಿ ಅಥವಾ ಮತ್ತೊಬ್ಬರ ತೃಪ್ತಿ ಬಿಟ್ಟು ಸಂಘಟನೆಯ ಜವಾಬ್ದಾರಿ, ಬರವಣಿಗೆ ಶಕ್ತಿ ಸದ್ಬಳಕೆಯಾಗಬೇಕು. ಇದೀಗ ಸಾಮಾಜಿಕ ಜಾಲತಾಣ, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಭವಿಷ್ಯ ಅಳಿವು-ಉಳಿವಿನ ಸ್ಥಿತಿ ತಲುಪಿದೆ ಎಂದು ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಈಶ್ವರ ಶೆಟ್ಟರ ವಿಷಾದ ವ್ಯಕ್ತಪಡಿಸಿದರು.
ಇಂದು ಜರುಗಿದ ರಬಕವಿ-ಬನಹಟ್ಟಿ ತಾಲೂಕಾ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ಷರ ಶತ್ರುಗಳೇ ಸಂಪಾದಕ, ಪತ್ರಕರ್ತರಾಗಿರುವದು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಹಿರಿಯ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಉಪನ್ಯಾಸ ನೀಡಿ ಮಾತನಾಡಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಕೊಂಡಿಯಾಗಿ ಪತ್ರಿಕೋದ್ಯಮ ಶ್ರಮಿಸುತ್ತಿದೆ. ಭಾಷ ಸುಧಾರಣೆ ಪ್ರತಿಯೊಬ್ಬ ವರದಿಗಾರನಲ್ಲಿರಬೇಕು. ಆತ್ಮವಿಶ್ವಾಸ ಹಾಗು ವಸ್ತುನಿಷ್ಠ ಬರಹಗಳಿಂದ ಪತ್ರಕರ್ತರ ಹಾಗು ಪತ್ರಿಕೆಯ ಘನತೆ ಹೆಚ್ಚುವದೆಂದರು.
ಕಾರ್ಯಕ್ರಮವನ್ನು ವಿನೂತನವಾಗಿ ಪತ್ರಕರ್ತರಿಗೆ ಬರವಣಿಗೆಯೊಂದಿಗೆ ಸಂದೇಶ ನೀಡುವ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ರಬಕವಿ-ಬನಹಟ್ಟಿ ಪತ್ರಕರ್ತರ ಸಂಘದ ಅಧ್ಯಕ್ಷ ನೀಲಕಂಠ ದಾತಾರ ವಹಿಸಿದ್ದರು. ಅತಿಥಿಗಳಾಗಿ ಎಂ.ಎನ್. ಶಾಲಗಾರ, ಸಂಘದ ಕಾರ್ಯದರ್ಶಿ ಚಂದ್ರಶೇಖರ ತುಂಗಳ ಆಗಮಿಸಿದ್ದರು.
ಬಸಯ್ಯ ವಸ್ತ್ರದ ಸ್ವಾಗತಿಸಿದರು. ಮಲ್ಲಿಕಾರ್ಜುನ ತುಂಗಳ ನಿರೂಪಿಸಿದರು. ವಿಶ್ವಜ ಕಾಡದೇವರ ನಿರೂಪಿಸಿದರು. ಕಿರಣ ಆಳಗಿ, ಯಶವಂತ ವಾಜಂತ್ರಿ, ಚಿದಾನಂದ ಕಾರಜೋಳ, ರವೀಂದ್ರ ಅಷ್ಟಗಿ, ಪ್ರಕಾಶ ಕುಂಬಾರ, ಎಸ್.ಎಂ. ಮೇಟಿಪಾಟೀಲ, ಜೆ.ಯು. ಮೊಹ್ಮದ್, ರಾಮು ಕಾಡಾಪುರ, ಯಶವಂತ ವಾಘಮೋರೆ, ಬಸವರಾಜ ಪಟ್ಟಣ, ಮಹಾದೇವ ತೊಟಗೇರ, ಮಲ್ಲಿಕಾರ್ಜುನ ನಾಶಿ, ವಿ.ಡಿ. ಪತ್ತಾರ, ಅರುಣ ಯಾದವಾಡ, ವಸಂತ ಬುದ್ನಿ, ಮಹಾದೇವ ಕೋಪರ್ಡೆ ಸೇರಿದಂತೆ ಅನೇಕರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin