ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಖಂಡನೆ : ಆರೋಪಿಗೆ ಕಠಿಣ ಶಿಕ್ಷೆ ವಿಧಿಲು ಆಗ್ರಹ...
(ಸ್ವರೂಪ ಸಂದರ್ಶನ ವರದಿ : ಮ.ಕೃ.ಮೇಗಾಡಿ, ತೇರದಾಳ)
ರಬಕವಿ-ಬನಹಟ್ಟಿ : ಬಂಗಾರುಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಕುರುಹಿನಶೆಟ್ಟಿ ಸರಕಾರಿ ನೌಕರರ ಸಂಘವು ಶನಿವಾರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಮನವಿ ಪತ್ರವನ್ನು ರಬಕವಿ-ಬನಹಟ್ಟಿ ಉಪತಹಶೀಲ್ದಾರ್ ಬಿ.ಎಂ.ಬಿಜ್ಜರಗಿಯವರಿಗೆ ಸಲ್ಲಿಸಿದರು.
ಸಂಘದ ರಾಜ್ಯಾಧ್ಯಕ್ಷ ಸುರೇಶ ನೀಲನೂರ ಮಾತನಾಡಿ, ಜುಲೈ 9ರಂದು ಕೋಲಾರ ಜಿಲ್ಲೆ ಬಂಗಾರುಪೇಟೆ ತಾಲೂಕಿನ ತಹಶೀಲ್ದಾರ್‍ರಾಗಿದ್ದ ಬಿ.ಕೆ.ಚಂದ್ರಮೌಳೇಶ್ವರ ಅವರು ತೊಪ್ಪನಹಳ್ಳಿ ಗ್ರಾಮದ ರಾಮಮೂರ್ತಿ ಹಾಗೂ ವೆಂಕಟಪತಿ ಎಂಬುವವರ ಜಮೀನಿನ ವ್ಯಾಜ್ಯದ ಸಂಬಂಧ ಪೊಲೀಸರ ರಕ್ಷಣೆಯಲ್ಲಿ ಜಂಟಿ ಸರ್ವೇಕಾರ್ಯನಿರತ ಸಂದರ್ಭದಲ್ಲಿ ಆರೋಪಿ ವೆಂಕಟಪತಿಯವರು ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರಿಗೆ ಏಕಾಏಕಿ ಚಾಕುವಿನಿಂದ ಇರಿದು ಹತ್ಯೆಗೈದಿರುವುದನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದರು.
ಸಂಘದ ಸದಸ್ಯರಾದ ಮ.ಕೃ.ಮೇಗಾಡಿ, ಎನ್.ಎನ್.ಬೇವೂರ, ಸಿ.ಬಿ.ಜೈನಾಪುರ ಮಾತನಾಡಿ ಸರಕಾರಿ ಅಧಿಕಾರಿಗಳು, ನೌಕರರು ಅಲ್ಲಲ್ಲಿ ಇಂತಹ ಕೆಟ್ಟ ಘಟನೆಗಳು, ದುಷ್ಕøತ್ಯಗಳು ಸಂಭವಿಸುತ್ತಿರುವುದರಿಂದ ನೌಕರರ ವರ್ಗ ಆತಂಕ ಹಾಗೂ ಭಯದಿಂದ ಕರ್ತವ್ಯನಿರ್ವಹಿಸುವಂತಾಗಿದ್ದು, ಇಂತಹ ಪರಿಸ್ಥಿತಿಗಳು ಮರುಕಳಿಸದಂತೆ ಸರಕಾರ ಕಠಿಣ ಕಾನೂನುಗಳನ್ನು ರೂಪಿಸಬೇಕೆಂದು ಹೇಳಿದರು. ಅಪರಾಧಿಯನ್ನು ಕೂಡಲಳೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಸಂಘವು ಆಗ್ರಹಿಸುತ್ತದೆ ಎಂದರು.
ಏಕನಾಥ ಮುಂಡಾಸ, ಎಂ.ಎಂ.ಮುಗಳಖೋಡ, ಎಸ್‍ಎಸ್.ಬೀಳಗಿ, ಸಂಗಮೇಶ ಕವಟಗಿ, ಅಶೋಕ ಶಿರಗೂರ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಫೋಟೊ ವಿವರ : ಬಂಗಾರುಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಕುರುಹಿನಶೆಟ್ಟಿ ಸರಕಾರಿ ನೌಕರರ ಸಂಘವು ಶನಿವಾರ ರಬಕವಿ-ಬನಹಟ್ಟಿ ಉಪತಹಶೀಲ್ದಾರ್ ಬಿ.ಎಂ.ಬಿಜ್ಜರಗಿಯವರಿಗೆ ಮನವಿಪತ್ರ ಸಲ್ಲಿಸಿದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin