ರಬಕವಿ ವಿದ್ಯಾನಗರ ಬಡಾವಣೆಯಲ್ಲಿರುವ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರದ ಎದುರು ಆಶಾ ಕಾರ್ಯಕರ್ತೆಯರು ಪ್ರತಿಭಟಿಸಿದರು.
12000 ಗೌರವಧನ ನೀಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ರಬಕವಿ-ಬನಹಟ್ಟಿ,ಜು10: ಕೊರೊನಾ ವೈರಸ್ ನಿಯಂತ್ರಣದಲ್ಲಿ ಅತೀ ಮುಖ್ಯ ಪಾತ್ರ ವಹಿಸಿದವರಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ದುಡಿಮೆಗೆ ಮಾಸಿಕ 12 ಸಾವಿರ ಗೌರವಧನ ನೀಡಬೇಕೆಂದು ಅಗ್ರಹಿಸಿ ರಬಕವಿ-ಬನಹಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಿಗ್ಗೆ ರಬಕವಿ ವಿದ್ಯಾನಗರ ಬಡಾವಣೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ಮಾಡಿದ ಅವರು, ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಹೋರಾಟದ ನೇತೃತ್ವ ವಹಿಸಿದ್ದ ಭಾರತಿ ಶಿರಗೂರ ತಿಳಿಸಿದರು.
ಕೋವಿಡ್-19 ವಿರುದ್ದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ ಕೋವಿಡ್ ರಕ್ಷಣೆಗಾಗಿ ನಮಗೆ ಯಾವುದೇ ರೀತಿಯ ಸುರಕ್ಷತಾ ಸಾಮಗ್ರಿಗಳನ್ನು ಸರ್ಕಾರ ನೀಡಿಲ್ಲ ಎಂದು ಇನ್ನೋರ್ವ ಕಾರ್ಯಕರ್ತೆ ಬೇಬಿಶ್ರೀ ಹಾಸಿಲಕರ ತಿಳಿಸಿದರು.
ನಂತರ ತಾಲೂಕಾ ಹಿರಿಯ ವೈಧ್ಯಾಧಿಕಾರಿ ಎಂ. ಎನ್. ನಾದಾಫ್ ರವರಿಗೆ ಮನವಿ ಸಲ್ಲಿಸಿದರು. ಲಕ್ಷ್ಮೀ ತಳವಾರ, ಸಕ್ಕೂಬಾಯಿ ಪೂಜಾರಿ, ಶೋಭಾ ಗುಣಕಿ, ಗೀತಾ ಆರಗಿ, ಸವಿತಾ ಔರಸಂಗ್, ಸವಿತಾ ಬಾವಲತ್ತಿ, ಕವಿತಾ ಕಡ್ಲಿಮಟ್ಟಿ, ಕವಿತಾ ಆಲಗೂರ, ಲಕ್ಷ್ಮೀ ಹಳ್ಳಿ, ಶಿವಲೀಲಾ ಪಾಟೀಲ, ಪೂಜಾ ಅಡವಿತೋಟ, ಯಲ್ಲವ್ವ ಉಂಕಿ ಸೇರಿದಂತೆ ಅನೇಕರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin