ಎಎಸ್‍ಐಗೆ ಕೊರೊನಾ ದೃಢಪಟ್ಟ ಸೀಲ್‍ಡೌನ್ ಆದ ಬನಹಟ್ಟಿ ಪೊಲೀಸ್ ಠಾಣೆ...
ಎಎಸ್‍ಐಗೆ ಕೊರೊನಾ ದೃಢ: ಬನಹಟ್ಟಿ ಪೊಲೀಸ್ ಠಾಣೆ ಸೀಲ್‍ಡೌನ್
ರೈತ ಹಾಗು ವ್ಯಾಪಾರಸ್ಥರಲ್ಲಿ ಕೊರೊನಾತಂಕ
ರಬಕವಿ-ಬನಹಟ್ಟಿ,ಜು16: ಯಾವದೇ ರೀತಿ ಶಂಕೆಯಿರದ ಎಎಸ್‍ಐರೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಕಾರಣ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಮೂರು ದಿನಗಳ ಕಾಲ ಸೀಲ್‍ಡೌನ್ ಮಾಡಿದ ಪ್ರಸಂಗ ಬುಧವಾರ ತಡರಾತ್ರಿ ನಡೆದಿದೆ.
ಸಾಮಾನ್ಯವಾಗಿ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಬೇಕೆಂಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಜಿಲ್ಲೆಯೆಲ್ಲೆಡೆ ಪರೀಕ್ಷೆ ಮಾಡಲಾಗುತ್ತಿದೆ. ಬನಹಟ್ಟಿ ಪೊಲೀಸ್ ಠಾಣೆಯ ಸುಮಾರು 38 ಸಿಬ್ಬಂದಿಗಳ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆಂದು ದಿ.10 ರಂದು ಕಳಿಸಲಾಗಿತ್ತು. ಇದಕ್ಕೆ ಸಂಬಂಧ ಅರ್ಧಕ್ಕೂ ಅಧಿಕ ಪೊಲೀಸರ ವರದಿ ಬಂದಿದ್ದು, ಅದರಲ್ಲಿ ಎಎಸ್‍ಐ ಒಬ್ಬರಿಗೆ ಕೊರೊನಾ ಪಾಜಿಟಿವ್ ಬಂದ ಹಿನ್ನಲೆ ಎಲ್ಲ ಪೊಲೀಸರಲ್ಲಿ ಆತಂಕ ಮೂಡಿದೆ. ಪ್ರಾಥಮಿಕ ಸಂಪರ್ಕಿತರ ಪೈಕಿ 8 ಜನ ಪೊಲೀಸರು ಹಾಗು ಮೂವರು ಸಾರ್ವಜನಿಕ ವಲಯದಲ್ಲಿರುವವರನ್ನು ಕ್ವಾರಂಟೈನ್ ಮಾಡಲಾಗಿದೆ.
ರೈತರಲ್ಲಿ ಕರೊನಾ ಭೀತಿ; ಕರೊನಾ ಪಾಜಿಟಿವ್ ಬಂದ್ ಬನಹಟ್ಟಿಯ ಠಾಣೆಯ ಸಿಬ್ಬಂದಿ ಜು.13 ರಂದು ನೂರಾರು ರೈತರು ತಾಲೂಕಿನ ತಹಸೀಲ್ದಾರ ಕಚೇರಿ ಎದುರು ಧರಣಿ ಸತ್ಯಾಗ್ರಹ ಪ್ರತಿಭಟನೆ ಸಂದರ್ಭ ಬಂದೋಬಸ್ತ್ ವಹಿಸಿದ್ದರು. ಇದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ನೂರಾರು ರೈತರಲ್ಲಿ ಹಾಗೂ ವರದಿಗೆ ತೆರಳಿದ ಪತ್ರಕರ್ತರಲ್ಲೂ ಕರೊನಾ ಸೊಂಕಿನ ಭೀತಿ ಎದುರಾಗಿದೆ. ಅವರು ಸಹ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯತೆ ಎದುರಾಗಿದೆ.
ವ್ಯಾಪಾರಿಗಳಿಗೂ ಆತಂಕ: ಸೋಂಕಿತ ಎಎಸ್‍ಐ ವರದಿ ಬರುವ ಕೆಲ ಗಂಟೆಗಳ ಹಿಂದಿನವರೆಗೂ ಸೇವೆಯಲ್ಲಿದ್ದು, ಬುಧವಾರ ರಾತ್ರಿವರೆಗೂ ಪಟ್ಟಣದಾದ್ಯಂತ ಸಂಚಾರ ನಡೆಸಿದ್ದಾರೆ. ಈ ಸಂದರ್ಭ ಹಲವಾರು ವ್ಯಾಪಾರಿ, ತರಕಾರಿ ವ್ಯಾಪಾರಿ, ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಒಟ್ಟಾರೆ ಪಟ್ಟಣದಾದ್ಯಂತ ತೀವ್ರ ಆತಂಕ ಮೂಡಿಸುವಲ್ಲಿ ಕಾರಣವಾಗಿದೆ.
`ಬನಹಟ್ಟಿ ಹಾಗೂ ತೇರದಾಳ ಠಾಣೆಯ ಪಕ್ಕದಲ್ಲಿರುವ ಚಿಕ್ಕ ಕೊಠಡಿಯಲ್ಲಿ ಸಣ್ಣಪುಟ್ಟ ಪ್ರಕರಣಗಳಿದ್ದರೆ ಸಾರ್ವಜನಿಕರು ಬರಭಹುದು. ಪ್ರಕರಣ ದಾಖಲಿಸುವಂತೆ ಕೇಸ್‍ಗಳಿದ್ದರೆ ತಾತ್ಕಾಲಿಕವಾಗಿ ಮಹಾಲಿಂಪುರ ಠಾಣೆಯಲ್ಲಿ ದಾಖಲಿಸುಕೊಳ್ಳಲಾಗುವುದು. ಈಗ ಇನ್ನೂ ಎರಡು ದಿನ ಎರಡೂ ಠಾಣೆಯಲ್ಲಿ ಸ್ಯಾನಿಟೈಸರ್ ಮಾಡಿ ನಂತರ ಎಂದಿನಂತೆ ಸಾರ್ವಜನಿಕರ ಸೇವೆಗೆ ಠಾಣೆಗಳು ಲಭ್ಯವಿರುತ್ತವೆ.---- ಜೆ.ಕರುಣೇಶಗೌಡ. ಬನಹಟ್ಟಿ ಸಿಪಿಐ.
ರೈತ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗುರುತಿಸಿ ಸ್ವಯಂ ತಪಾಸಣೆ ಹಾಗೂ ಕ್ವಾರಂಟೈನ್ ಆಗುವಂತೆ ನಮ್ಮೆಲ್ಲ ರೈತ ಬಾಂಧವರಿಗೂ ವಿಷಯ ತಿಳಿಸುತ್ತೇನೆ.--- ಹೊನ್ನಪ್ಪ ಬಿರಡಿ. ರೈತ ಮುಖಂಡ. ರಬಕವಿ.

Social Plugin