ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಗ್ರಾಮೀಣ ಮಂಡಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪಕ್ಷ ಬಲವರ್ಧನೆಗೆ ಶ್ರಮಿಸಲು ಸವದಿ ಸಲಹೆ
ರಬಕವಿ-ಬನಹಟ್ಟಿ,ಜು16: ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಗಳ ಸಂದರ್ಭ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರಮುಖವಾಗಿ ನೂತನವಾಗಿ ಆಯ್ಕೆಗೊಂಡ ಗ್ರಾಮೀಣ ಮಂಡಳದ ಪದಾಧಿಕಾರಿಗಳು ಬೇರು ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಪಕ್ಷ ಬಲವರ್ಧನೆಗೆ ಶ್ರಮಿಸಬೇಕೆಂದು ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿ ಸಲಹೆ ನೀಡಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷದ ತೇರದಾಳ ಮತಕ್ಷೇತ್ರ ಗ್ರಾಮೀಣ ಮಂಡಳ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪಕ್ಷದ ಹಿತ ಕಾಪಾಡುವದರ ಜೊತೆಗೆ ಮಹಾಮಾರಿ ಕೊರೊನಾ ರೋಗದ ವಿರುದ್ಧ ಜನತೆಗೆ ಸ್ಪಂದಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಅಧ್ಯಕ್ಷರಾಗಿ ಸುರೇಶ ಅಕ್ಕಿವಾಟ, ಪ್ರಧಾನ ಕಾರ್ಯದರ್ಶಿಗಳಾಗಿ ಆನಂದ ಕಂಪು, ಮಹಾಲಿಂಗಪ್ಪ ಕುಳ್ಳೋಳ್ಳಿ, ಉಪಾಧ್ಯಕ್ಷರುಗಳಾಗಿ ಶಂಕರ ಹುನ್ನೂರ, ಗುರಲಿಂಗಪ್ಪ ಗೊಂಬಿ, ಸಂಗಮೇಶ ತುಳಸಿಗೇರಿ, ಕಾಶಿನಾಥ ತುಳಸಿಗೇರಿ, ಬಸವರಾಜ ಕುಂಚನೂರ, ಕಾಳವ್ವ ವೆಂಕಪ್ಪ ಕೇದಾರಿ, ಕಾರ್ಯದರ್ಶಿಗಳಾಗಿ ಆರತಿ ಸದಾಶಿವ ಗೊಟಡಕಿ, ಸುನೀತಾ ಬಾಳಪ್ಪ ಕೆಂಚಪ್ಪಗೋಳ, ಚಂದ್ರವ್ವ ಗೌಡರ, ಸನ್ಮತಿ ಶಿವಪ್ಪ ಬಸವಣಪೂಜೇರಿ, ಸದಾಶಿವ ಪಟ್ಟಣಶೆಟ್ಟಿ, ಶಾಂತಾ ಕಲ್ಲಪ್ಪ ಮಳವಂಕಿ ಸೇರಿದಂತೆ ಒಟ್ಟು 60 ಕ್ಕೂ ಅಧಿಕ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವೇದಿಕೆ ಮೇಲೆ ಬ್ಲಾಕ್ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಬಸನಗೌಡ ಪಾಟೀಲ, ಟಿ.ಎ. ಬಿರಾದಾರ, ರಾಜು ಅಂಬಲಿ, ಜಿಪಂ ಸದಸ್ಯರಾದ ಪರಶುರಾಮ ಬಸವ್ವಗೋಳ, ಪುಂಡಲೀಕ ಪಾಲಭಾಂವಿ, ಲಕ್ಕಪ್ಪ ಪಾಟೀಲ ಇದ್ದರು.