ಬುಧವಾರ ರಾತ್ರಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಿ ಮಾಡುತ್ತಿರುವುದು.
ತೇರದಾಳ ಪೋಲಿಸ್ ಸಿಬ್ಬಂದಿಗೆ ಅಂಟಿದ ಸೋಂಕು
ತೇರದಾಳ : ಕೊರೊನಾ ಮಹಾಮಾರಿ ಸೋಂಕು ದಿನೇ ದಿನೇ ಹೆಚ್ಚುತ್ತಲಿದೆ. ಪಟ್ಟಣದ ಪೋಲಿಸ್ ಠಾಣೆಯಲ್ಲಿ ಒಬ್ಬ ಸಿಬ್ಬಂದಿಗೆ ವೈರಸ್ ಅಂಟಿದ್ದು ಪೋಲಿಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಲಾಗಿದೆ. ಹಾಗೂ ಅವರು ವಾಸಿಸುತ್ತಿರುವ ಹಳೆಯ ಪೋಲಿಸ್ ಕ್ವಾಟರ್ಸ್‍ಗೆ ಹೋಗುವ ರಸ್ತೆ ಸಹ ಬಂದ ಮಾಡಲಾಗಿದೆ.
ಬುಧುವಾರ ರಾತ್ರಿ ಸೋಂಕು ತಗುಲಿದ ವ್ಯೆಕ್ತಿಯನ್ನು ಬಗಲಕೋಟ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮತ್ತು ಇವರ ಕುಟುಂಬದವರನ್ನು ಬನಹಟ್ಟಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಹಲವು ಜನರನ್ನು ಸಹ ಮುಂಜಾಗ್ರತೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುರಸಭೆ ವತಿಯಿಂದ ಅವರು ವಾಸಿಸುತ್ತಿರುವ ಕ್ವಾಟರ್ಸ್ ಹಾಗೂ ಪೋಲಿಸ್ ಠಾಣೆಯನ್ನು ಸ್ಯಾನಿಟೈಜರ್ ಮಾಡಲಾಗಿದೆ. ಈಗಾಗಲೇ ಸುಮಾರು 30 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರಲ್ಲಿ ಒಬ್ಬರ ವರದಿ ಮಾತ್ರ ಪಾಸಿಟೀವ್ ಬಂದಿದ್ದು, ಇನ್ನುಳಿದವರ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಸ್ಥಳಿಯ ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ತಿಳಿಸಿದ್ದಾರೆ.
ಇನ್ನು ಮುಂದೆಯಾದರೂ ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸಬೇಕು. ಹಾಗೂ ತಪ್ಪದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಆಗಾಗ ಸ್ಯಾನಿಟೈಜರ್‍ದಿಂದ ಕೈ ತೊಳೆಯಬೇಕು ಎಂದು ವೈದ್ಯಾಧಿಕಾರಿ ಡಾ.ಸುದರ್ಶನ್ ನಿಡೋಣಿ ಈ ಮೂಲಕ ತಿಳಿಸಿದ್ದಾರೆ.



Social Plugin