ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೂರು ಮಕ್ಕಳು ಸಾವನ್ನಪ್ಪಿ ತಾಯಿ ಅಸ್ವಸ್ಥಗೊಂಡ ಪ್ರದೇಶ ಪರಿಶೀಲಿಸುತ್ತಿರುವ ಪೊಲೀಸರು.
ಮೂವರು ಮಕ್ಕಳ ಸಾವು: ತಾಯಿ ಅಸ್ವಸ್ಥ
ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ
ರಬಕವಿ-ಬನಹಟ್ಟಿ,ಜು4: ತಾಯಿ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿದ ಕಾರಣ ಸಾವನ್ನಪ್ಪಿವೆ ಅಲ್ಲದೆ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದೆರಡು ವರ್ಷಗಳ ಹಿಂದೆ ತನ್ನ ಪತಿ ಸಾವನ್ನಪ್ಪಿದ್ದಲ್ಲದೆ ವಯಕ್ತಿಕ ಕಾರಣದಿಂದ ಮನನೊಂದ ಭಾಗ್ಯಶ್ರೀ ಚಿಕ್ಕಯ್ಯ ಮಠದ(32) ತನ್ನ ಮಕ್ಕಳಾದ ಶಿವಾನಿ(12), ಶಿವಶಂಕರ(10), ಶಿವಶ್ರೀ(9) ಈ ಮೂವರಿಗೂ ವಿಷ ಉಣಿಸಿ ನಂತರ ತಾನೂ ಆತ್ಮಹತ್ಯೆಗೆ ಕಾರಣರಾದವರಾಗಿದ್ದಾರೆ.
ಘಟನೆ: ಶನಿವಾರ ಬೆಳಿಗ್ಗೆ 6:30 ರ ಸುಮಾರಿಗೆ ತಮ್ಮ ತೋಟದ ಮನೆಯಿಂದ ಜಗದಾಳ ಗ್ರಾಮದ ಹತ್ತಿರದ ದುರ್ಗಾದೇವಿ ದೇವಸ್ಥಾನಕ್ಕೆ ಹೋಗಿ ಬರುವದಾಗಿ ತಿಳಿಸಿ 10 ಗಂಟೆಯಾದರೂ ಮನೆಗೆ ವಾಪಸ್ ಬಾರದೆ ಇದ್ದಾಗ, ಮನೆಯವರು ಹುಡುಕಾಟ ನಡೆಸಿದ ನಂತರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಭಾಗ್ಯಶ್ರೀ ತೀವ್ರ ಅಸ್ವಸ್ಥದಿಂದ ಬಳಲುತ್ತಿದ್ದರೆ ಮೂವರು ಮಕ್ಕಳೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದವು.
ಮನೆಯಿಂದ ಬರುವಾಗ ಕುಡಿಯುವ ನೀರಿನಲ್ಲಿ ಉಣ್ಣೆಗೆ ಸಿಂಪಡಿಸುವ ಔಷಧಿಯನ್ನು ಮಿಶ್ರಣಗೊಳಿಸಿ ಮಕ್ಕಳಿಗೆ ನೀಡಿದ್ದಲ್ಲದೆ ತಾನೂ ಸಹ ಕುಡಿದಿರುವದಾಗಿ ಮೆಲ್ನೋಟಕ್ಕೆ ಕಂಡು ಬಂದ ವಿಷಯವಾಗಿದೆ.
ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಹಾಗು ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿದ್ದಾರೆ.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin