ತೇರದಾಳ : ಕೋವಿಡ್19 ಮಹಾಮಾರಿಯಿಂದಾಗಿ ತೇರದಾಳ ಪಟ್ಟಣದಲ್ಲಿ ಜನರು ತಲ್ಲಣಗೊಂಡಿದ್ದಾರೆ. ಗುರುವಾರ ಮತ್ತೇ ಮೂವರಲ್ಲಿ ಕೊರೊನಾ ವೈರಸ್ ಧೃಡಪಟ್ಟಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಪಿ.ಎಸ್.ಮಠಪತಿ ಹಾಗೂ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ ತಿಳಿಸಿದ್ದಾರೆ.
ಪೋಲಿಸ್ ಪೇದೆ ಸಂಪರ್ಕಿತ 22ವರ್ಷ ವಯಸ್ಸಿನ ಪತ್ನಿ ಹಾಗೂ 4ವರ್ಷದ ಮಗನಿಗೆ ಸೋಂಕು ತಗಲಿದೆ ಎಂದು ತಿಳಿದು ಬಂದಿದೆ. ಸರಕಾರಿ ಆಸ್ಪತ್ರೆಯ 58ವರ್ಷದ ಮಹಿಳಾ ಸಿಬ್ಬಂದಿಗೆ ಸೋಂಕು ಧೃಡ ಪಟ್ಟಿದೆ. ಕೋವಿಡ್ ಮಹಾಮಾರಿಯ ನಾಗಾಲೋಟ ಹೆಚ್ಚಾಗಿದ್ದು ಜನರಲ್ಲಿ ಆತಂಕವನ್ನು ಮೂಡಿಸಿದೆ.
ಪಟ್ಟಣದ ಪ್ರಮುಖರು ಹಾಗೂ ವ್ಯಾಪಾರಸ್ಥರು ಪುರಸಭೆಯ ಆವರಣದಲ್ಲಿ ಸಭೆ ಸೇರಿ ಕೊರೊನಾ ತಡೆಗಟ್ಟಲು ಪಟ್ಟಣದಲ್ಲಿ ಗುರುವಾರ 23ರಿಂದ ಮುಂದಿನ ಗುರುವಾರ ಜು.30ರವರೆಗೆ ಸ್ವಯಂ ಲಾಕ್‍ಡೌನ್ ಪಟ್ಟಣದ ಹಿರಿಯರು ನಿರ್ಣಯಿಸಿದ್ದರು. ಅದರಂತೆ ಇಂದು ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಇಂದು ಬಂದ್ ಮಾಡಲಾಗಿತ್ತು. ಜನರು ಮಾತ್ರ ಅನಾವಶ್ಯಕವಾಗಿ ಸಂಚರಿಸುವುದನ್ನು ಮಾತ್ರ ಬಿಟ್ಟಿಲ್ಲ. ಎಲ್ಲರೂ ಸ್ವಯಂವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಸ್ಯಾನಿಟೈಜರ್‍ದಿಂದ ಕೈತೊಳೆದುಕೊಳ್ಳಬೇಕು. ಸರಕಾರದ ನಿಯಮಗಳನ್ನು ಪಾಲಿಸುವುದರಿಂದ ಕೋವಿಡ್ 19ನ್ನು ತಡೆಗಟ್ಟಬಹುದು. ಹಾಗೂ ಯಾರೂ ಅನಾವಶ್ಯಕವಾಗಿ ಹೊರಗಡೆ ಸಂಚರಿಸುವುದನ್ನು ಬಿಟ್ಟು ಮನೆಯಲ್ಲಿಯೇ ಇದ್ದು ಕೊವಿಡ್ 19ನಿಂದ ರಕ್ಷಣೆ ಪಡೆಯಬೇಕು ಎಂದು ಗ್ರಾಮಲೆಕ್ಕಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Social Plugin