ಬನಹಟ್ಟಿಯಲ್ಲಿ ತೇರದಾಳ ಶಾಸಕ ಸಿದ್ದು ಸವದಿಯವರಿಗೆ ಆಶಾ ಕಾರ್ಯಕರ್ತರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಪತ್ರ ನೀಡಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಮನವಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ತೇರದಾಳ ಶಾಸಕ ಸಿದ್ದು ಸವದಿಯವರಿಗೆ ಮನವಿ ಅರ್ಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಯಾವದೇ ರಕ್ಷಣೆಯಿಲ್ಲ. ಪಿಪಿಇ ಕಿಟ್, ಮಾಸ್ಕ್, ಕೈಗವಸು ಸೇರಿದಂತೆ ಇನ್ನಿತರೆ ಸುರಕ್ಷತಾ ಪರಿಕರ ಸಮರ್ಪಕವಾಗಿ ನೀಡುತ್ತಿಲ್ಲ. ಕಾರಣ 50 ಲಕ್ಷ ರೂ. ಜೀವವಿಮೆ ಅನ್ವಯಿಸಿ ಕೋವಿಡ್-19ರಲ್ಲಿ ಕರ್ತವ್ಯದಲ್ಲಿರುವ ಕಾರ್ಯಕರ್ತೆಯರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ಮಾಸಿಕ ವೇತನ 4 ಸಾವಿರ ರೂ. ಬದಲಾಗಿ 12 ಸಾವಿರ ರೂ.ಗಳನ್ನು ಒದಗಿಸಿದ್ದಲ್ಲಿ, ದುಡಿಯುವ ಕೈಗಳಿಗೆ ನ್ಯಾಯಯುತ ಸಂಬಳ ಸರ್ಕಾರದಿಂದ ಒದಗಿದಂತಾಗುವದು. ಇದರಲ್ಲಿ ಯಾವದೇ ರೀತಿ ವಿಳಂಬನೀತಿ ಅನುಸರಿಸದೆ ಮಾಸಿಕ ನ್ಯಾಯಯುತ ವೇತನ ಒದಗಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಎಐಯುಟಿಯುಸಿ ಸಂಘದ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣಾ ಆಸಂಗಿ, ಆಶಾ ಸುಗಮಕಾರರಾದ ಚಂದ್ರವ್ವ ಪೂಜಾರಿ, ಬೌರವ್ವ ತುಪ್ಪದ, ಬೌರವ್ವ ಉರಭಿನವರ, ಅನ್ನಪೂರ್ಣ ಮಠಪತಿ, ಗಂಗವ್ವ ಜಂಬಗಿ, ದೇವಕ್ಕಿ ಬಡಿಗೇರ, ಬಸಪ್ಪ ವಗ್ಗರ, ಮಾಳಪ್ಪ ಡುಮ್ಮನವರ, ಸಂಜು ಮಾಳಿ, ನಾರಾಯಣ ಸುತಾರ, ಲಕ್ಕಪ್ಪ ಮಾಂಗ ಉಪಸ್ಥಿತರಿದ್ದರು.

Social Plugin