ರಾಂಪೂರದಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಕಂಟೇನ್ಮೇಂಟ್ ವಲಯ ನಿರ್ಮಿಸಿರುವದು.
ರಬಕವಿ-ಬನಹಟ್ಟಿ: ಮತ್ತೇ 9 ಜನರಿಗೆ ಕೊರೊನಾ ಸೋಂಕು
*ಹೆಚ್ಚಾಗುತ್ತಿರುವ ಕಂಟೇನ್ಮೆಂಟ್ ವಲಯಗಳು-ಆತಂಕದಲ್ಲಿ ಜನತೆ
 ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಗುರುವಾರ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ.
ಬನಹಟ್ಟಿಯಲ್ಲಿ 3, ತೇರದಾಳ 3, ಮಹಾಲಿಂಗಪೂರ ಪೊಲೀಸ್ ಠಾಣೆ ವ್ಯಾಪ್ತಿ 2 ಹಾಗು ರಾಮಪೂರದಲ್ಲಿ ಓರ್ವ ಪತ್ರಕರ್ತರಿಗೆ ಕೊರೊನಾ ಸೋಂಕು ತಗುಲಿದೆ.
ಮಹಾಲಿಂಗಪೂರ ಪೊಲೀಸ್ ಠಾಣೆಯ ಇಬ್ಬರಿಗೆ ಕೊರೊನಾ ದೃಢಪಟ್ಟರೆ, ಬನಹಟ್ಟಿಯಲ್ಲಿ ಎಎಸ್‍ಐಗೆ ಸಂಬಂಧಿಸಿದ ಕ್ವಾರಂಟೈನ್‍ಲ್ಲಿದ್ದರೋರ್ವರಿಗೆ ಅದರಂತೆ ತೇರದಾಳ ಪೊಲೀಸ್‍ಗೆ ತಗುಲಿದ ವ್ಯಕ್ತಿಯಿಂದ ಮೂವರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ತೇರದಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಬನಹಟ್ಟಿಯಲ್ಲಿ ಮನೆಯಿರುವ ಕಾರಣ ಮನೆ ಸುತ್ತ ಕಂಟೇನ್ಮೇಂಟ್ ವಲಯ ಮಾಡಲಾಗಿದೆ.
ರಾಂಪೂರದಲ್ಲಿಯೂ ಎರಡು ಕಡೆ ಕಂಟೇನ್ಮೆಂಟ್ ವಲಯ ಮಾಡಲಾಗಿದ್ದು, ಜನತೆ ತೀವ್ರ ಭಯಭೀತರಾಗಿದ್ದಾರೆ.
ರಬಕವಿ ಜಾತ್ರೆ ರದ್ದು: ಕೊರೊನಾ ವೈರಸ್ ಹಾವಳಿಯಿಂದಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಬರುವ ಶ್ರಾವಣ ಮಾಸದ ಮೂರನೇಯ ಸೋಮವಾರವಾದ ಅಗಸ್ಟ್ 10 ರಂದು ನಡೆಯಬೇಕಿದ್ದ ಆರಾಧ್ಯದೈವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ, ಕಳಸ ಪೂಜೆ, ಕುಸ್ತಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದ ಶಂಕರಲಿಂಗ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ಬಾಲಚಂದ್ರ ಉಮದಿ(ಅಣ್ಣನವರು) ತಿಳಿಸಿದ್ದಾರೆ.