ರಬಕವಿ-ಬನಹಟ್ಟಿ ಮೊದಲ ಸಾರಿ ಪ್ರಕರಣ
*ಮತ್ತೆ ಇಬ್ಬರಿಗೆ ಕೊರೊನಾ ಪಾಜಿಟಿವ್
ರಬಕವಿ-ಬನಹಟ್ಟಿ,ಜು14: ರಬಕವಿ-ಬನಹಟ್ಟಿಯಲ್ಲಿ ಕೊರೊನಾ ಪಾಜಿಟಿವ್ ಪ್ರಕರಣಗಳಿಗೆ ಸ್ವಲ್ಪ ವಿರಾಮವಾಗಿತ್ತು. ಇದೀಗ ಮತ್ತೆ ಇಬ್ಬರಲ್ಲಿ ಕೊರೊನಾ ಪಾಜಿಟಿವ್ ದೃಢಪಟ್ಟ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದೆ.
ರಬಕವಿಯ ಮೊಮಿನ್ ಗಲ್ಲಿಯಲ್ಲಿ ಸಾರಿ ಪ್ರಕರಣಕ್ಕೆ ಸಂಬಂಧ 50 ವರ್ಷದ ಮಹಿಳೆಯೋರ್ವಳಿಗೆ ಕೊರೊನಾ ದೃಢಪಟ್ಟಿದೆ. ಕಳೆದ ವಾರದ ಹಿಂದೆ ನಿಮೋನಿಯಾದಿಂದ ಬಳಲುತ್ತಿದ್ದ ಮಹಿಳೆ ರಬಕವಿಯ ಖಾಸಗಿ ಆಸ್ಪತ್ರೆಗೆ ದಿ.9 ರಂದು ದಾಖಲಾಗಿದ್ದರು. ಇವರ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆಗೆಂದು ಕಳಿಸಿದಾಗ ಕೊರೊನಾ ಪಾಜಿಟಿವ್ ದೃಢಪಟ್ಟಿದೆ.
ಕಂಟೇನ್ಮೇಂಟ್ ಝೋನ್: ರಬಕವಿಯ ಮೋಮಿನ್ ಗಲ್ಲಿಯ 5 ಕುಟುಂಬಗಳನ್ನು ಕಂಟೇನ್ಮೇಂಟ್ ಝೋನ್‍ನಲ್ಲಿ ಇರಿಸಲಾಗಿದ್ದು, 9 ಜನ ಪ್ರಾಥಮಿಕ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಕಳಿಸಲಾಗಿದ್ದು, ದ್ವಿತೀಯ ಸಂಪರ್ಕಿತರಾಗಿರುವ 29 ಜನರಲ್ಲಿ ಕಂಟೇನ್ಮೆಂಟ್ ಝೋನ್‍ನಲ್ಲಿನ ಮನೆಗಳಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಬನಹಟ್ಟಿಯ ಉರ್ದು ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ ಮಹಿಳೆಯೋರ್ವಳಿಗೆ ಕೊರೊನಾ ಪಾಜಿಟಿವ್ ಕಂಡು ಬಂದಿದೆ. ಕಳೆದ 14 ದಿನಗಳಿಂದ ಕ್ವಾರಂಟೈನ್‍ನಲ್ಲಿದ್ದ ಈ ಮಹಿಳೆಗೆ ಈ ಮೊದಲು ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆ ಕಳಿಸಿದ ಸಂದರ್ಭ ನೆಗೆಟಿವ್ ಬಂದಿತ್ತು. ಮತ್ತೊಂದು ಬಾರಿ ಕಳಿಸಿದಾಗ ಪಾಜಿಟಿವ್ ದೃಢಪಟ್ಟಿರುವದು ವಿಚಿತ್ರವಾಗಿದೆ.

Social Plugin