ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಸಾರಿ ಕೇಸ್‍ನಲ್ಲಿ ಕೊರೊನಾಗೆ ಬಲಿಯಾದ ವ್ಯಕ್ತಿ ಮನೆ ಸುತ್ತ ಕಂಟೇನ್ಮೆಂಟ್ ಝೋನ್ ಮಾಡಲಾಗಿರುವದು.
ರಬಕವಿ-ಬನಹಟ್ಟಿ: ಕೊರೊನಾಗೆ ಮತ್ತೇ ಮೂವರ ಬಲಿ, 9 ಜನರಿಗೆ ಕೊರೊನಾ
*ಪೊಲೀಸರ ಸುತ್ತ ಗಿರಕಿ ಹೊಡೆಯುತ್ತಿರುವ ಕೊರೊನಾ
ರಬಕವಿ-ಬನಹಟ್ಟಿ,ಜು22: ತಾಲೂಕಿನಾದ್ಯಂತ ಕೊರೊನಾ ತನ್ನ ರುದ್ರನರ್ತನ ಮುಂದುವರೆಸಿದೆ. ಇಲ್ಲಿಯವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 6 ಕ್ಕೇರಿದ್ದು, ಒಂದೇ ದಿನದಲ್ಲಿ ಮೂವರು ಸೋಂಕಿಗೆ ಬಲಿಯಾಗಿದ್ದಾರೆ.
ರಬಕವಿ, ಬನಹಟ್ಟಿ ಹಾಗು ತೇರದಾಳದಲ್ಲಿ ತಲಾ ಒಬ್ಬರು ಬಲಿಯಾಗಿದ್ದು, ತೇರದಾಳದಲ್ಲಿ 6, ರಬಕವಿ, ಬನಹಟ್ಟಿ ಹಾಗು ಚಿಮ್ಮಡದಲ್ಲಿ ತಲಾ 1 ಸೇರಿ ಒಟ್ಟು 9 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ತೇರದಾಳದ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕಿಗೆ ಕಾರಣವಾಗಿದ್ದು ಸಮುದಾಯದಲ್ಲಿ ತೀವ್ರ ಆತಂಕ ಮೂಡಿಸುವಲ್ಲಿ ಕಾರಣವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರ ಪಟ್ಟಿ ತಯಾರಿಕೆ ಒಂದು ಸವಾಲಾಗಿ ಪರಿಣಮಿಸಿದೆ. ಒಟ್ಟಾರೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ತೀವ್ರತರವಾಗಿ ಸೋಂಕು ಹರಡುತ್ತಿರುವದರಿಂದ ಜನತೆ ಭಾರಿ ಆತಂಕದಲ್ಲಿದ್ದಾರೆ.
ಸಾರಿ, ಐಎಲ್‍ಐ ಜನರೇ ಬಲಿ: ಕೊರೊನಾ ಪಾಜಿಟಿವ್‍ಗೆ ಸಂಬಂಧ ವಯೋವೃದ್ಧರು ಸಾರಿ ಹಾಗು ಐಎಲ್‍ಐ ಗೆ ಸಂಬಂಧಿಸಿದವರೇ ತಾಲೂಕಿನಲ್ಲಿ ಬಲಿಯಾಗುತ್ತಿದ್ದು, ಇಂದು ಮೃತಪಟ್ಟ ಮೂವರಲ್ಲೂ ಇದೇ ರೋಗವಿದೆ. ಒಟ್ಟಾರೆ ವೃದ್ಧರು ಹಾಗು ಮಕ್ಕಳು ಮನೆ ಬಿಟ್ಟು ಹೊರಬಾರದಂತೆ ತಾಲೂಕಾಡಳಿತ ಮನವಿ ಮಾಡುತ್ತಿದ್ದರೂ ಬೇಕಾಬಿಟ್ಟಿ ಸಂಚಾರ ಮಾತ್ರ ಹಾಗೇ ಮುಂದುವರೆಯುತ್ತಿದೆ.